



ಡೈಲಿ ವಾರ್ತೆ:14 ಫೆಬ್ರವರಿ 2023


ಪಡುಬಿದ್ರಿ: ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ, ಸ್ಕೂಟರ್ ಸವಾರನ ಸಾವು
ಪಡುಬಿದ್ರಿ: ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಬ್ಯಾರಿಕೇಡ್, ಸ್ಕೂಟರ್ ಮತ್ತು ಮಹೀಂದ್ರ ಪಿಕ್ ಅಪ್ ಗಳಿಗೆ ಇಂದು ಮಧ್ಯಾಹ್ನದ ವೇಳೆ ಢಿಕ್ಕಿಯಾಗಿದೆ.
ಅಪಘಾತದಲ್ಲಿ ತೀವ್ರತರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪಡುಬಿದ್ರಿಯ ಅಪಘಾತವಲಯವಾಗಿ ಗುರುತಿಸಲ್ಪಟ್ಟಿರುವ ಪಡುಬಿದ್ರಿ ಕಾರ್ಕಳ ಜಂಕ್ಷನ್ ನಲ್ಲಿ ಈ ಅವಘಡವು ಸಂಭವಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.