ಡೈಲಿ ವಾರ್ತೆ:14 ಫೆಬ್ರವರಿ 2023

ಹಿಂದೂ ಯುವ ಸೇನೆಯ ಧರ್ಮ ಜಾಗೃತಿಯೊಂದಿಗೆ ಸಾಮಾಜಿಕ ಬದ್ಧತೆಯ ಕಾರ್ಯ ನಿರಂತರವಾಗಲಿ : ರಾಜಶೇಖರಾನಂದ ಸ್ವಾಮೀಜಿ

ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

ಉಡುಪಿ: ಹಿಂದೂ ಯುವ ಸೇನೆಯ ರಾಷ್ಟ್ರ ಪ್ರೇಮಿ ಚಿಂತನೆಯ ಮೂಲಕ ಹಿಂದುತ್ವ, ಗೋ ರಕ್ಷಣೆಯಲ್ಲಿ ಸಕ್ರಿಯರಾಗಿರುವ ಸಾವಿರಾರು ಕಾರ್ಯಕರ್ತರ ಧಾರ್ಮಿಕ ಜಾಗೃತಿಯೊಂದಿಗೆ ಸಾಮಾಜಿಕ ಬದ್ಧತೆಯ ಕಾರ್ಯ ನಿರಂತರವಾಗಿ ಸಾಗಿ ಬರಲಿ ಎಂದು ವಜ್ರದೇಹಿ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಹಿಂದೂ ಯುವ ಸೇನೆ ಉಡುಪಿ ಜಿಲ್ಲೆ ವತಿಯಿಂದ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಸತ್ಯ ನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 2 ಸಾವಿರ ಮಂದಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಹಿಂದೂ ಯುವ ಸೇನೆಯ ಜಿಲ್ಲಾಧ್ಯಕ್ಷರಾದ ಅಜಿತ್ ಕುಮಾರ್ ಕೊಡವೂರು, ಗೌರವಾಧ್ಯಕ್ಷರಾದ ಶೇಖರ್ ಶೆಟ್ಟಿ ಹಿರಿಯಡ್ಕ, ಜಿಲ್ಲಾ ಕಾರ್ಯದರ್ಶಿ ಅರುಣ್ ಕುಂದರ್, ನಗರ ಅಧ್ಯಕ್ಷರಾದ ಸುನೀಲ್ ನೇಜಾರು, ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಸುವರ್ಣ, ಕೋಶಾಧಿಕಾರಿ ಉಮೇಶ್ ಹನುಮಾನ್ ನಗರ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ರಾಮ್ ಬನ್ನಂಜೆ, ಪ್ರಮುಖರಾದ ಸುಧಾಕರ ಮಲ್ಯ, ಸನತ್ ಸಾಲ್ಯಾನ್ ಮಲ್ಪೆ, ಸುರೇಶ್ ಸಾಲ್ಯಾನ್ ಮಲ್ಪೆ, ಮಂಜು ಕೊಳ,ಕೇಂದ್ರೀಯ ಮಂಡಳಿ ಅಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಕೊರಗಪ್ಪ ಶೆಟ್ಟಿ,ಸಂದೀಪ್ ಶೆಟ್ಟಿ ಎಕ್ಕೂರು, ದಿನೇಶ್ ಮೂಡುಬೆಟ್ಟು, ನವೀನ್ ಕರ್ಜೆ, ದಿಲೀಪ್ ಅಗ್ರಹಾರ ಸನತ್ ಶೆಟ್ಟಿ ಹಿರಿಯಡ್ಕ, ಪ್ರಕಾಶ್ ಕುಕ್ಕೆ ಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಮಟ್ಟು ಯತೀಶ್ ಕೋಟ್ಯಾನ್ ಕಾರ್ಯಕ್ರಮದ ನಿರೂಪಿಸಿ ವಂದಿಸಿದರು.