ಡೈಲಿ ವಾರ್ತೆ:14 ಫೆಬ್ರವರಿ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ ಮಾರಿಕಾಂಬಾ ಸಮಿತಿ ಅಧ್ಯಕ್ಷನ ವಿರುದ್ದ ನಾಮದೇವ ಸಿಂಪಿ ಸಮಾಜದವರಿಂದ ಪ್ರತಿಭಟನೆಯ ರಣಕಹಳೆ

ಸಾಗರ: ಸಾಗರ ಮಾರಿಕಾಂಬಾ ಸಮಿತಿ ಅಧ್ಯಕ್ಷರ ವಿರುದ್ಧ ನಾಮದೇವ ಸಿಂಪಿ ಸಮಾಜದವರು ದಿಡೀರ್ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.



ಮಾರಿಕಾಂಬ ಜಾತ್ರಾ ಮಹೋತ್ಸವವು ಫೆ. 07 ರಿಂದ ಆರಂಭಗೊಂಡಿದ್ದು ಫೆ.15 ಕ್ಕೆ ಜಾತ್ರೆ ಮುಕ್ತಾಯಗೊಳ್ಳಲಿದೆ. ಫೆ.11 ರಂದು ಶನಿವಾರ ನಾಮದೇವ ಸಿಂಪಿ ಸಮಾಜ ದೇವಿಗೆ ಹಾರವನ್ನ ತಂದು ಹಾಕಲು ಮುಂದಾಗಿದ್ದಾರೆ.
ಆದರೆ ಹಾರವನ್ನ ತಂದ ಸಮಾಜಕ್ಕೆ ಅಧ್ಯಕ್ಷರು ಅಸಭ್ಯವಾಗಿ ವರ್ತಿಸಿದ್ದಾರೆ. ಜನ ಹೆಚ್ಚಾಗಿ ಬಂದ ಕಾರಣ ಹಾರವನ್ನ ತಿಪ್ಪೇಗುಂಡಿಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಸಮಾಜ ಅಧ್ಯಕ್ಷ ನಾಗೇಂದ್ರರ ವಿರುದ್ಧ ಜಾತ್ರ ಮಹೋತ್ಸವ ಸ್ಥಳಕ್ಕೆ ಬಂದು ನ್ಯಾಯ ಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.



ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಅಧ್ಯಕ್ಷರ ಈ ನಡೆ ಸಮಾಜವನ್ನ ರಚ್ಚಿಗೆಬ್ಬಿಸಿದೆ. ಎಲ್ಲರನ್ನೂ ಒಂದಾಗಿ ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕಿದ್ದ ಅಧ್ಯಕ್ಷರ ವಿರುದ್ಧ ಅಸಮಾಧಾನ ಬುಗಿಲೆದ್ದಿದೆ. ಸ್ಥಳಕ್ಕೆ ಅಧ್ಯಕ್ಷರು ಬಂದು ಕ್ಷಮೆ ಕೇಳಿ ಧರಣಿ ನಿರತರಲ್ಲಿ ನಾಲ್ಕು ಜನ ಒಳಗೆ ಬರುವಂತೆ ತಿಳಿಸಿದ್ದಾರೆ.

ಅವರ ಸೂಚನೆಯಿಂದ ಮತ್ತಷ್ಟು ಕುಪಿತಗೊಂಡ ಸಮಾಜ ನಾವು ಒಳಗೆ ಯಾಕೆ ಬರಬೇಕು ಇಲ್ಲೇ ಮಾತನಾಡಿ ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ. ನಿಂತಲ್ಲೇ ಜಾತ್ರ ಸಮಿತಿಯ ಅಧ್ಯಕ್ಷರು ಕ್ಷಮೆ ಕೇಳಿದ್ದಾರೆ.