



ಡೈಲಿ ವಾರ್ತೆ:15 ಫೆಬ್ರವರಿ 2023


ದಕ್ಷಿಣಕನ್ನಡ: ಪಚ್ಚನಾಡಿಯಲ್ಲಿ ಮತ್ತೆ ಗುಡ್ಡಕ್ಕೆ ಬೆಂಕಿ: ಮರಗಿಡಗಳು ಬೆಂಕಿಗಾಹುತಿ
ಮಂಗಳೂರು: ಪಚ್ಚನಾಡಿಯಲ್ಲಿ ಅಗ್ನಿ ದೇವನ ಆಟ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಈ ಬಾರಿ ತ್ಯಾಜ್ಯದ ಬದಲು ಪಕ್ಕದ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು ವರದಿಯಾಗಿದೆ.

ಬುಧವಾರ ತ್ಯಾಜ್ಯ ವಿಲೇವಾರಿ ಪ್ರದೇಶ ವ್ಯಾಪ್ತಿಯ ಗುಡ್ಡದಲ್ಲಿ ಪೊದೆ, ಮರಗಿಡಗಳು ಬೆಂಕಿಗೆ ಆಹುತಿಯಾಗಿದೆ. ಮಧ್ಯಾಹ್ನ ಸುಮಾರು ೨ ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಕದ್ರಿ ಅಗ್ನಿಶಾಮಕ ಠಾಣೆಯ ಸಿಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಂಗಳ ಹಿಂದೆ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದ ಸ್ಥಳದ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಮತ್ತೆ ತ್ಯಾಜ್ಯಕ್ಕೆ ಹರಡುವ ಸಾಧ್ಯತೆಯೂ ಇತ್ತು. ಸದ್ಯ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದ್ದು. ಯಾವ ಕಾರಣಕ್ಕೆ ಬೆಂಕಿ ಬಿದ್ದಿದೆ ಎಂದು ತಿಳಿದು ಬಂದಿಲ್ಲ.