



ಡೈಲಿ ವಾರ್ತೆ:16 ಫೆಬ್ರವರಿ 2023


ಕಲಬುರಗಿ: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ
ಕಲಬುರಗಿ: ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಅಂಬಿಕಾ ನಗರದಲ್ಲಿ ನಡೆದಿದೆ.
ಫರೀದಾ ಬೇಗಂ(39) ಮೃತಪಟ್ಟವರು. ಇಝಾಝ್ ಅಹಮ್ಮದ್ 13 ವರ್ಷಗಳ ಹಿಂದೆ ಫರೀದಾ ಬೇಗಂ ಅವರನ್ನು ಮದುವೆಯಾಗಿದ್ದ. ಪತಿ-ಪತ್ನಿ ಇಬ್ಬರು ಸರ್ಕಾರಿ ಶಿಕ್ಷಕರಾಗಿದ್ದರು.
ಇಝಾಝ್ ತನ್ನ ಹೆಂಡತಿಯನ್ನು ಶಾಲೆಗೆ ಹೋಗದಂತೆ ದಿನಾಲು ತಡೆಯುತ್ತಿದ್ದ ಎಂದು ತಿಳಿದುಬಂದಿದೆ.
ಅನೈತಿಕ ಸಂಬಂಧದ ಅನುಮಾನದಡಿ ಇಝಾಝ್ ಅಹ್ಮದ್ ತನ್ನ ಪತ್ನಿ ಫರೀದಾ ಬೇಗಂರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.