



ಡೈಲಿ ವಾರ್ತೆ:17 ಫೆಬ್ರವರಿ 2023


ಉಡುಪಿ: ಕಾರ್ಮಿಕನ ಮೃತದೇಹವನ್ನು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು, ಇಬ್ಬರ ಬಂಧನ!
ಉಡುಪಿ: ಅಸ್ವಸ್ಥ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಉಳಿದ ಇಬ್ಬರು ಆತನನ್ನು ಗೂಡ್ಸ್ ವಾಹನವೊಂದರಲ್ಲಿ ಹಾಕಿ ತಂದು ಕಸದ ರಾಶಿಗೆ ಎಸೆದ ಪ್ರಕರಣ ಕೆಮ್ಮಣ್ಣು ಸಂತೆ ಮಾರುಕಟ್ಟೆಯ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಮೃತ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿದೆ. ಈತ ವಾರದ ಸಂತೆ ಹಿನ್ನೆಲೆಯಲ್ಲಿ ಕೆಮ್ಮಣ್ಣು ಮಾರುಕಟ್ಟೆಗೆ ವ್ಯಾಪಾರ ನಡೆಸಲು ಬಂದಿದ್ದ ಎನ್ನಲಾಗಿದೆ. ಆದರೆ ಅಸ್ವಸ್ಥಗೊಂಡು ಮೃತಪಟ್ಟಿದ್ದನು.
ಇದನ್ನು ಕಂಡು ಇತರ ಇಬ್ಬರು ವ್ಯಾಪಾರಿಗಳು ಹನುಮಂತನ ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ಸಾಗಿಸಿಕೊಂಡು ಹೋಗಿ ಕೆಮ್ಮಣ್ಣು ಸಂತೆಮಾರುಕಟ್ಟೆ ಬಳಿಯ ರಸ್ತೆಬದಿ ಕಸದ ರಾಶಿಗೆ ಎಸೆದು ಹೋಗಿದ್ದಾರೆ.
ಮಾಹಿತಿ ತಿಳಿದ ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಮೃತದೇಹವನ್ನು ಉಡುಪಿ ಅಜ್ಜರ ಕಾಡು ಆಸ್ಪತ್ರೆಗೆ ಸಾಗಿಸಿದ್ದಾರೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಇಬ್ಬರು ಕಾರ್ಮಿಕರನ್ನು ಬಂಧಿಸಿದ್ದಾರೆ.