ಡೈಲಿ ವಾರ್ತೆ:17 ಫೆಬ್ರವರಿ 2023

ತೆಕ್ಕಟ್ಟೆ: ಆಕಸ್ಮಿಕ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆ – ಅಗ್ನಿ ಶಾಮಕ ದಳದವರಿಂದ ರಕ್ಷಣೆ

ಕೋಟ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆಯೋರ್ವರು ಅಗ್ನಿಶಾಮಕ ದಳದವರ ಕ್ಷಿಪ್ರ ಕಾರ್ಯಚಾರಣೆಯಿಂದಾಗಿ ಬದುಕುಳಿದ ಘಟನೆ ಶುಕ್ರವಾರ ಬೆಳಿಗ್ಗೆ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪ ನಡೆದಿದೆ.

ರತ್ನಾವತಿ ಶೆಟ್ಟಿ ಉಳ್ತೂರು (52) ಎಂಬವರೇ ಅಗ್ನಿಶಾಮಕರಿಂದ ಪುನರ್ಜನ್ಮ ಪಡೆದವರು. ಇವರು ಬೆಳಿಗ್ಗೆ ಬಾವಿಯಿಂದ ನೀರೆತ್ತುವಾಗ ಆಕಸ್ಮಿಕ ಕಾಲು ಜಾರಿ 20 ಅಡಿ ಆಳದ ಬಾವಿಗೆ ಬಿದ್ದರು. ತಕ್ಷಣ ಮನೆಯವರು ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಅವರು ಬಾವಿಗೆ ಇಳಿದು ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾವಿಯಲ್ಲಿ ಸಾಕಷ್ಟು ನೀರಿದ್ದುದರಿಂದ ಆಕೆಗೆ ಪೆಟ್ಟಾಗಿಲ್ಲ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ದಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ರತ್ನಾವತಿ ಶೆಟ್ಟಿಯವರ ಪತಿ ಹೊರ ರಾಜ್ಯದಲ್ಲಿ ಹೋಟೆಲ್ ಉದ್ಯಮಿಯಾಗಿದ್ದಾರೆ. ಇಬ್ಬರು ಪುತ್ರಿಯಾರೊಂದಿಗೆ ಆಕೆ ಉಳ್ತೂರಿನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.