ಡೈಲಿ ವಾರ್ತೆ:20 ಫೆಬ್ರವರಿ 2023
5 ವರ್ಷದ ಹಿಂದೆ ಮಹಾರಾಷ್ಟ್ರದ ಚರಂಡಿಯಲ್ಲಿ ಸಿಕ್ಕಿದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ
ಮಹಾರಾಷ್ಟ್ರ: 2018 ರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರದಲ್ಲಿ ಚರಂಡಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಇಟಲಿಯ ದಂಪತಿಗಳು ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ
2018 ರಲ್ಲಿ ಮಹಾರಾಷ್ಟ್ರದ ಥಾಣೆಯ ಉಲ್ಹಾಸ್ ನಗರದಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವೊಂದು ಇಲ್ಲಿನ ಚರಂಡಿಯಲ್ಲಿರುವುದನ್ನು ವಡೋಲ್ ಗ್ರಾಮದ ಶಿವಾಜಿ ರಾಗಾಡೆ ಮತ್ತು ಅವರ ಪತ್ನಿ ಜಯಶ್ರೀ ಪತ್ತೆ ಮಾಡಿ ಥಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಪರೀಕ್ಷಿಸಿದ ವೇಳೆ ಮಗುವಿನ ತಲೆಯಲ್ಲಿ ಗಾಯಗಳಾಗಿ ಅನಾರೋಗ್ಯದಿಂದ ಬಳಲುತ್ತಿತ್ತು ಕೂಡಲೇ ಮಗುವನ್ನು ಮುಂಬೈನ ವಾಡಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲದೆ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನೂ ಹಂಚಲಾಗಿತ್ತು, ಆದರೆ ಮಗುವಿನ ಪೋಷಕರು ಪತ್ತೆಯಾಗಿರಲಿಲ್ಲ ಅಲ್ಲದೆ ಆಸ್ಪತ್ರೆಯಲ್ಲಿದ್ದ ಮಗುವಿನ ಆರೈಕೆಗೆ ಹೆಚ್ಚಿನ ಹಣದ ಅವಶ್ಯಕತೆ ಇದ್ದುದರಿಂದ ದಾನಿಗಳಿಂದ ನೆರವನ್ನು ಯಾಚಿಸಿದ್ದರು ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಕೇವಲ 24 ಗಂಟೆಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿತ್ತು.
ಮಗುವಿನ ಪೋಷಕರ ಪತ್ತೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ ಕೆಲವು ಸಮಯಗಳ ಬಳಿಕ ಇಟಲಿಯ ದಂಪತಿಗಳು ಮಗುವನ್ನು ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ ಈ ವೇಳೆ ಇಟಲಿಯ ದಂಪತಿಗಳಿಗೆ ಕಾನೂನಿನ ಸಮಸ್ಯೆ ಎದುರಾದ ಪರಿಣಾಮ ಮಗುವನ್ನು ಆಶ್ರಮದಲ್ಲಿ ಆರೈಕೆ ಮಾಡಲಾಗಿತ್ತು ಆದರೆ ಇದೀಗ ಇಟಲಿ ದಂಪತಿ ಕಾನೂನು ತೊಡಕುಗಳನ್ನು ಪೂರ್ಣಗೊಳಿಸಿ ಕಳೆದ ಶುಕ್ರವಾರ ಮಗುವನ್ನು ದತ್ತು ಪಡೆದು ಸಂತೋಷದಿಂದ ಇಟಲಿಗೆ ತೆರಳಿದ್ದಾರೆ. ಅವರ ಮುಂದಿನ ಜೀವನ ಒಳ್ಳೆಯದಾಗಲಿ ಎಂದು ನಾವು ಹಾರೈಸೋಣ