


ಡೈಲಿ ವಾರ್ತೆ:21 ಫೆಬ್ರವರಿ 2023


ಟರ್ಕಿ-ಸಿರಿಯಾ ಗಡಿಯಲ್ಲಿ ಮತ್ತೆ 2 ಪ್ರಬಲ ಭೂಕಂಪ: 3 ಮಂದಿ ಸಾವು, 200ಕ್ಕೂ ಅಧಿಕ ಜನರಿಗೆ ಗಾಯ
ಟರ್ಕಿ: ಟರ್ಕಿ- ಸಿರಿಯಾ ಗಡಿಯಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಟರ್ಕಿಯ ಹಟೇ ಪ್ರಾಂತ್ಯದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮಧ್ಯ ಟರ್ಕಿ, ಸಿರಿಯಾ, ಇಸ್ರೇಲ್ ಮತ್ತು ಬಹುಶಃ ಲೆಬನಾನ್ನಲ್ಲಿ ನಡುಕ ಉಂಟಾಗಿದೆ. ಹಟೇಯಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ವರದಿ ಮಾಡಲಾಗಿದೆ.
ವರದಿ ಪ್ರಕಾರ, ಮೂವರು ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇತ್ತೀಚೆಗೆ ಟರ್ಕಿ, ಸಿರಿಯಾ ಗಡಿಯಲ್ಲಿ ನಡೆದ ಪ್ರಬಲ ಭೂಕಂಪನಕ್ಕೆ ಕನಿಷ್ಠ 46,000 ಮಂದಿ ಮೃತಪಟ್ಟಿದ್ದರು.