


ಡೈಲಿ ವಾರ್ತೆ:22 ಫೆಬ್ರವರಿ 2023


ನೇಪಾಲದಲ್ಲಿ ಕಂಪಿಸಿದ ಭೂಮಿ: ದೆಹಲಿ ಸೇರಿ ಉತ್ತರ ಭಾರತದ ಹಲವೆಡೆ ಕಂಪನ ಅನುಭವ
ನವದೆಹಲಿ: ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೀಕರ ಭೂಕಂಪ ಕಣ್ಣೆದುರಿಗಿರುವಾಗಲೇ ನೇಪಾಳದಲ್ಲಿ ಇಂದು ಮದ್ಯಾಹ್ನ 1.45ರ ವೇಳೆಗೆ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ಕಾಣಿಸಿದೆ. ಇದನ್ನು ನೇಪಾಳದ ಭೂಕಂಪ ಪರೀಕ್ಷಣಾ ಮತ್ತು ಸಂಶೋಧನಾ ಕೇಂದ್ರ ಖಾತ್ರಿ ಪಡಿಸಿದೆ.
ಈ ಭೂಕಂಪದ ತೀವ್ರತೆಗೆ ದೆಹಲಿ ಸೇರಿ ಉತ್ತರ ಭಾರತದ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಇತ್ತೀಚಗಷ್ಟೇ ಹಲವು ತಜ್ಙರು ಭಾರತದಲ್ಲೂ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದಿರುವಾಗಲೇ ಹಿಮಾಲಯದ ತಪ್ಪಲ ಪ್ರದೇಶಗಳಲ್ಲಿ ಈ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.