ಡೈಲಿ ವಾರ್ತೆ:26 ಫೆಬ್ರವರಿ 2023

ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದವರ ಮೇಲೆ ಘೇಂಡಾಮೃಗ ದಾಳಿ: ಏಳು ಪ್ರವಾಸಿಗರಿಗೆ ಗಾಯ: (ವಿಡಿಯೋ ವೀಕ್ಷಿಸಿ)

ಕೋಲ್ಕತ್ತಾ: ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೊರಟಿದ್ದ ಪ್ರವಾಸಿಗರ ವಾಹನಕ್ಕೆ ಎರಡು ಘೇಂಡಾಮೃಗಗಳು ಢಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ.

ಪ್ರವಾಸಿಗರು ಜಲ್ದಪಾರಾ ನ್ಯಾಶನಲ್ ಪಾರ್ಕ್ ನಲ್ಲಿ ಜೀಪ್ ನಲ್ಲಿ ಸಫಾರಿ ಮಾಡುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದ ಪೊದೆಗಳಲ್ಲಿ ಎರಡು ಘೇಂಡಾಮೃಗಗಳು ಕಾದಾಟದಲ್ಲಿ ತೊಡಗಿದ್ದವು. ಪ್ರವಾಸಿಗರು ಆ ಕ್ಷಣವನ್ನು ಸೆರೆಹಿಡಿಯಲು ತಮ್ಮ ಕ್ಯಾಮೆರಾಗಳನ್ನು ಕೈಗೆತ್ತಿಕೊಂಡರು.

ಪ್ರವಾಸಿಗರು ಜೀಪ್ ನಲ್ಲಿ ಫೋಟೊ – ವಿಡಿಯೋಗಳನ್ನು ತೆಗೆಯುತ್ತಿದ್ದಾಗ ಘೇಂಡಾಮೃಗಗಳ ದೃಷ್ಟಿ ಇವರತ್ತ ಹರಿಯಿತು. ಇವರು ನೋಡುತ್ತಿದ್ದಂತೆ ಎರಡು ಘೇಂಡಾಮೃಗಳು ಇವರತ್ತ ಧಾವಿಸಿದವರು. ಜೀಪು ಚಾಲಕ ಕೂಡಲೇ ವಾಹನವನ್ನು ಚಲಾಯಿಸಲು ಯತ್ನಿಸಿದರು. ಆದರೆ ಈ ಪ್ರಯತ್ನದಲ್ಲಿ ಅವರ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಉರುಳಿತು.