ಡೈಲಿ ವಾರ್ತೆ:26 ಫೆಬ್ರವರಿ 2023

ವರದಿ:, ವಿದ್ಯಾಧರ ಮೊರಬಾ

ವಿದ್ಯಾರ್ಥಿಗಳ ಭವಿಷ್ಯಕ್ಕೆ ವಸತಿ ನಿಲಯ ಉತ್ತಮ ಶಿಕ್ಷಣ ಪಡೆಯಲು ಸಹಕಾರ : ಸಚಿವ ಕೋಟ

ಅಂಕೋಲಾ : ರಾಜ್ಯದಲ್ಲಿ 2400 ವಸತಿ ನಿಲಯಗಳಿದ್ದು, ಇಲ್ಲಿ 2.50 ಲಕ್ಷ ವಿದ್ಯಾರ್ಥಿಗಳು ಉತ್ತಮ ಶಿಕ್ಷ ಣ ಪಡೆಯುತ್ತಿದ್ದಾರೆ. ಅರ್ಜಿಹಾಕಿದ 1.25 ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇದನ್ನು ಈಡೇರಿಸುವುದಕ್ಕಾಗಿ ಮುಖ್ಯಮಂತ್ರಿ ಅವರು ರೂ.135 ಕೋಟಿ ಅನುದಾನ
ಕಲ್ಪಿಸಿ ದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ 3.26 ಕೋಟಿ ರೂ.ವೆಚ್ಚ ದಿಂದ ನಿರ್ಮಿಸಿದ ಮೆಟ್ರಿಕ್ ನಂತರದ ಬಾಲಕಿಯರ
ವಸತಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಹೆಂಚಾ ನಾಯ್ಕರ ನೆನಪಿಗಾಗಿ ಸೇನಾ ಪೂರ್ವ ತರಬೇತಿ ಕೇಂದ್ರವನ್ನು ಉ.ಕ.ದ ಕಾರವಾರ ಮಾಜಾಳಿಯಲ್ಲಿ ಪ್ರಾರಂಭಿಸಿದ್ದು, ಪ್ರಥಮ ಬ್ಯಾಚ್ ಮುಗಿಸಿದ ತರಬೇತಿ ದಾರರಿಗೆ ತರಬೇತಿ ಪತ್ರ ಇಂದು
ವಿತರಿಸಲಿದ್ದೇವೆ. ಎಂದರು.

ಶಾಸಕಿ ರೂಪಾಲಿ ಎಸ್.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಸಚಿವ ಹಾಗೂ ಉಸ್ತುವಾರಿ ಮಂತ್ರಿ ಕೋಟ ಶ್ರೀನಿವಾಸ ಸರ್ ಅವರು ದಿನದ 24 ಗಂಟೆಗಳ ಕಾಲ ಜನ ಸೇವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ನಮಗೆ ಮಾದರಿ. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ನೀಡುವಂತಾಗಲಿ ಎಂದು ಆಶಿಸಿದರು.

ತಹಸೀಲ್ದಾರ್ ಸತೀಶ ಗೌಡ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಗಾಂವಕರ, ಮುಖ್ಯಾಧಿಕಾರಿ ಎನ್.ಎಂ.ಮೇಸ್ತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ. ಸತೀಶ, ಅಂಕೋಲಾ ಅಧಿಕಾರಿ
ಗಣೇಶ ಜಿ.ಪಟಗಾರ, ಜ್ಯೋತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಸತಿ ನಿಲಯದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಲಕ್ಷ್ಮೀ ಪಾಟೀಲ, ಭಾರತಿ ಪಟಗಾರ, ಶಿವಾನಂದ ನಾಯ್ಕ, ನಿರ್ವಹಿಸಿದರು