ಡೈಲಿ ವಾರ್ತೆ:27 ಫೆಬ್ರವರಿ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಇಂದು ಭವ್ಯ ಭಾರತದ ಪ್ರಧಾನಿ ಮೋದಿ ಅವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ನಾಡಿಗೆ ಲೋಕಾರ್ಪಣೆ : ಸಾಗರದ ಡಿ.ಎಂ. ಗಜಾನನ ಹಾಗೂ ಕುಟುಂಬದಿಂದ ತಯಾರಿಸಿದ ಶ್ರೀಗಂಧ ಕೆತ್ತನೆಯುಳ್ಳ ವಿಮಾನ ನಿಲ್ದಾಣದ ಪ್ರತಿಕೃತಿಯನ್ನು ರಚಿಸಿ ಸಮರ್ಪಿಸಲಿದ್ದಾರೆ

ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಿವಾಸಿಯಾದ ಡಿ ಎಂ ಗಜಾನನ ,ನಿವೃತ್ತ ಇಂಜಿನಿಯರ್, BSNL,ಸಾಗರ ಇವರು ಭಾರತದ ಪ್ರದಾನ ಮಂತ್ರಿ ಶ್ರೀ ನರೇಂದ್ರ ದಾಮೋದರ ಮೋದಿ ಅವರಿಗಾಗಿ ತಮ್ಮ ಕೈಚಳಕದಿಂದ ಕೆತ್ತಿದ ಶ್ರೀ ಗಂಧದಿಂದ ರಚಿಸಿದ ವಿಮಾನ ನಿಲ್ದಾಣದ ಪ್ರತಿಕೃತಿಯನ್ನು ಪ್ರಧಾನ ಮಂತ್ರಿಗಳಿಗೆ ಸಮರ್ಪಿಸಲಿದ್ದಾರೆ.

ಅತ್ಯಂತ ಅದ್ಬುತವಾಗಿ ಮೂಡಿ ಬಂದ ಈ ಕಲಾಕೃತಿಯು ಎರಡು ವರ್ಷಗಳ ಕಾಲ ಬಹಳ ಶ್ರದ್ಧೆಯಿಂದ ,ಪ್ರೀತಿಯಿಂದ, ಗೌರವದಿಂದ ಹಾಗೂ ಅಕ್ಕರೆಯಿಂದ ಕೆತ್ತಲ್ಪಟ್ಟಿದೆ*
*ಇದು ಸಂಖ್ಯೆಯಲ್ಲಿ ಅತೀ ಸಣ್ಣ ಸಮಾಜವಾದ(3000 ಕ್ಕೂ ಕಡಿಮೆಗುಡಿಗಾರ ಸಮಾಜಕ್ಕೆ ಬಹಳ ಹೆಮ್ಮೆಯ ವಿಷಯ*

” ಪ್ರಧಾನಿ ನರೇಂದ್ರ ಮೋದಿಗೆ ಶ್ರೀಗಂಧದ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿದ್ದು, ಅವರಿಗೆ ಉಡುಗೊರೆಯಾಗಿ ಶ್ರೀಗಂಧ ಕುಶಲಕಾರ್ಮಿಗಳಿಂದ ತಯಾರಾದ ಶ್ರೀಗಂಧದ ಶಿವಮೊಗ್ಗ “ವಿಮಾನ ನಿಲ್ದಾಣದ ಮಾಡೆಲ್”, ಇದನ್ನು ಶ್ರೀಯುತ ಆದರ್ಶ ಗಜಾನನ ಗುಡಿಗಾರ್ ಅವರು ತಯಾರಿಸಿದ್ದಾರೆ..ಇದನ್ನು 27 ರಂದು ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮಖ್ಯಮಂತ್ರಿಗಳು ಉಡುಗೊರೆಯಾಗಿ ನೀಡುತ್ತಾರೆ, ಇದು ನಮ್ಮ ಗುಡಿಗಾರರಿಗೆ ಹೆಮ್ಮೆ.