ಡೈಲಿ ವಾರ್ತೆ:28 ಫೆಬ್ರವರಿ 2023

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿಯ ಮನೆಯಲ್ಲಿ ನಡೆದಿದೆ.

ಲಿಯಾಖತ್ ಅಲಿಖಾನ್ (44) ಕೊಲೆಯಾದ ವ್ಯಕ್ತಿ.
ರಾತ್ರಿ ಜಿಮ್ ಗೆ ಹೋಗಿದ್ದ ಲಿಯಾಖತ್ ಅಲಿಖಾನ್ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಲಿಯಾಖತ್ ಅಲಿಖಾನ್ ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬಳಿಕ ಬೆಳಗಿನ ಜಾವ ಮತ್ತೊಂದು ಮನೆಯಲ್ಲಿ ಲಿಯಾಕತ್ ಶವವಾಗಿ ಪತ್ತೆ ಆಗಿದ್ದಾನೆ.

ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ. ಹಣಕಾಸಿನ ಹಿನ್ನೆಲೆ ಕೊಲೆ ಮಾಡಿರುವ ಬಗ್ಗೆ ಕುಟುಂಬಸ್ಥರು ಶಂಕಿಸಿದ್ದು, ಸ್ನೇಹಿತರಾದ ವಾಸೀಂ ಮತ್ತು ಜೋಹರ್ ಕೊಲೆ ಮಾಡಿರುವುದಾಗಿ ಆರೋಪ ಕೇಳಿ ಬರುತ್ತಿದೆ.