



ಡೈಲಿ ವಾರ್ತೆ:01 ಮಾರ್ಚ್ 2023


ಮಲ್ಪೆ: ಬೋಟ್ ಫ್ಯಾನ್ ಕಳ್ಳತನ: ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ
ಮಲ್ಪೆ : ದುರಸ್ತಿಗೆಂದು 3 ಕಡೆಗಳಲ್ಲಿ ಗ್ಯಾರೇಜಿಗೆ ತಂದಿರಿಸಲಾಗಿದ್ದ ಬೋಟ್‌ನ ಫ್ಯಾನನ್ನು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾತ್ರಿ ಪ್ರತ್ಯೇಕವಾಗಿ ಮಲ್ಪೆಯ ಮೂರು ಗ್ಯಾರೇಜ್‌ಗಳಲ್ಲಿ ಮೂರು ಫ್ಯಾನ್‌ಗಳು ಕಳವಾಗಿವೆ.
ನಾಲ್ವರು ಯುವಕರು ಮೂರು ಫ್ಯಾನ್‌ಗಳನ್ನು ಎತ್ತಿ ತಾವು ಬಂದಿದ್ದ ಟೆಂಪೋಗೆ ಸಾಗಿಸಿಕೊಂಡು ಹೋಗುವ ದೃಶ್ಯ ಗ್ಯಾರೇಜಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂರು ಫ್ಯಾನ್‌ಗಳ ಮೌಲ್ಯ ಸುಮಾರು 4 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಗ್ಯಾರೇಜಿನ ಮುಂಭಾಗದಲ್ಲಿ ಇರಿಸಲಾಗಿದ್ದ ಫ್ಯಾನ್‌ಗಳನ್ನು ಕಳವು ಮಾಡುವ ಯೋಜನೆಯನ್ನು ಈ ಯುವಕರು ಮುಂಚಿತವಾಗಿಯೇ ಹಾಕಿಕೊಂಡಿದ್ದರು.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.