



ಡೈಲಿ ವಾರ್ತೆ:05 ಮಾರ್ಚ್ 2023


ಸೈಕ್ಲಿಂಗ್ ಮಾಡುತ್ತಿದ್ದ ಉನ್ನತ ಪೊಲೀಸ್ ಅಧಿಕಾರಿಗೆ ಅಪರಿಚಿತ ವಾಹನ ಢಿಕ್ಕಿ: ಪೊಲೀಸ್ ಅಧಿಕಾರಿ ಮೃತ್ಯು
ಚಂಡೀಗಢ: ಅಪರಿಚಿತ ವಾಹನ ಢಿಕ್ಕಿಯಾಗಿ ಉನ್ನತ
ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಹರಿಯಾಣದಲ್ಲಿ ಶನಿವಾರ (ಮಾ. 4 ರಂದು) ನಡೆದಿದೆ ಹರ್ಯಾಣ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಚಂದ್ರಪಾಲ್ ಅವರು ಶನಿವಾರ ಸೈಕಲ್ ನಲ್ಲಿ ಹೋಗುತ್ತಿದ್ದರು.
ಸೈಕ್ಲಿಂಗ್ ಮಾಡುತ್ತಿರುವಾಗ ಅಪರಿಚಿತ ವಾಹನವೊಂದು ಹಿಂದಿನಿಂದ ಢಿಕ್ಕಿ ಹೊಡೆದು ಪರಾರಿ ಆಗಿದೆ. ಅಪಘಾತದ ತೀವ್ರತೆಗೆ ಸೈಕಲ್ ಸಂಪೂರ್ಣ ಹಾನಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಚಂದ್ರಪಾಲ್ ಅವರನ್ನುಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.ಡಿಎಸ್ ಪಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದ ಚಂದ್ರಪಾಲ್ ಅವರು ಪ್ರತಿನಿತ್ಯ ಸೈಕ್ಲಿಂಗ್ ಗೆ ಹೋಗುತ್ತಿದ್ದರು. ಶನಿವಾರ ಸಂಜೆಯೂ ನಿತ್ಯದಂತೆ ಸೈಕ್ಲಿಂಗ್ ಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ
ರಾಟಿಯಾ, ಫತೇಹಾಬಾದ್ ನಲ್ಲಿ ಚಂದ್ರಪಾಲ್ ಕರ್ತವ್ಯ ನಿಭಾಯಿಸುತ್ತಿದ್ದರು. ಪರಾರಿಯಾದ ವಾಹನದ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.