ಡೈಲಿ ವಾರ್ತೆ:05 ಮಾರ್ಚ್ 2023

ಉಳ್ಳಾಲದಲ್ಲಿ ಸೋಲಿಲ್ಲದ ಸರದಾರ ಯುಟಿ ಖಾದರ್ ಎದುರು ತಾಂಟ್ರೆ ಬಾ ತಾಂಟ್ ರಿಯಾಝ್ ಫರಂಗಿಪೇಟೆಯನ್ನು ಕಣಕ್ಕೆ ಇಳಿಸಿದ ಎಸ್‌ಡಿಪಿಐ!

ಮಂಗಳೂರು : ರಾಜ್ಯ ವಿಧಾನ ಸಭಾ ಚುನಾವಣಾ ಕಾವು ಜೋರಾಗಿದ್ದು, ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ದಕ್ಷಿಣ ಕನ್ನಡ 8 ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಗೆಲುವಿನ ಸರದಾರ ಪ್ರಭಾವಿ ಮುಸ್ಲಿಂ ಮುಖಂಡ, ಮಾಜಿ ಮಂತ್ರಿ ಮಂಗಳೂರು ಅಂದರೆ ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯುಟಿ ಖಾದರ್ ವಿರುದ್ಧವೇ ತಾಂಟಲು ಎಸ್‌ಡಿಪಿಐ ಪಕ್ಷದ ಅಭ್ಯರ್ಥಿ ತಾಂಟ್ರೆ ಬಾ ತಾಂಟ್‌ ಭಾಷಣದ ಮೂಲಕ ಪ್ರಸಿದ್ಧಿಗೆ ಬಂದಿರುವ ಎಸ್‌ಡಿಪಿಐ ಪಕ್ಷದ ಜನಪ್ರಿಯ ನಾಯಕ ರಿಯಾಝ್ ಪೆರಂಗಿಪೇಟೆ ಉಳ್ಳಾಲ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿರುವುದರಿಂದ ಮಂಗಳೂರು ವಿಧಾನಸಭಾ ಕ್ಷೇತ್ರವು ಇಡೀ ರಾಜ್ಯವೆ ಗಮನ ಸೆಳೆದಿದೆ.

ಕರಾವಳಿಯ ಮುಸ್ಲಿಂ ಸಮಾಜದ ಡೈನಾಮಿಕ್ ಲೀಡರ್ ರಿಯಾಝ್ ಪೆರಂಗಿಪೇಟೆ ಎಂಟ್ರಿಯಿಂದ ಕಾಂಗ್ರೆಸ್ ಮತ್ತು ಯುಟಿ ಖಾದರ್ ಗೆ ಆತಂಕ ಹೆಚ್ಚಾಗಿದೆ. ಏಕೆಂದರೆ ಉಳ್ಳಾಲ ಕ್ಷೇತ್ರದಲ್ಲಿ ಎಸ್‌ಡಿಪಿಐ ಪಕ್ಷಕ್ಕೆ ಬಲವಾದ ಹಿಡಿತ ಇದೆ. ರಿಯಾಝ್ ಪೇರೆಂಗಿಪೇಟೆಯವರಿಗೆ ದೊಡ್ಡ ಜನಬೆಂಬಲ ಇದ್ದು. ಈ ಕ್ಷೇತ್ರದಲ್ಲಿ ಶೇ. 50 ರಷ್ಟು ಮುಸ್ಲಿಮರು ಬದಲಾವಣೆ ಬಯಸಿದರೆ ಖಾದರ್ ಗೆಲುವಿಗೆ ಕಷ್ಟ ಎನ್ನುತಿದೆ ಕಾಂಗ್ರೆಸ್ ಮೂಲಗಳು. ಉಳ್ಳಾಲ ಕ್ಷೇತ್ರದಲ್ಲಿ ಎಸ್‌ಡಿಪಿಐ ಪಕ್ಷ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಲಿಸಿದ್ದರಿಂದ ಈ ಕ್ಷೇತ್ರದ ರಾಜಕೀಯ ಸಮಿಕರಣವೇ ಬದಲಾಗಿ ಹೋಗಿದೆ. ಏಕೆಂದರೆ ಎಸ್‌ಡಿಪಿಐ ಪಕ್ಷದ ನಾಯಕರು ಹೇಳುವ ಪ್ರಕಾರ ಇಡೀ ದೇಶದಲ್ಲಿ ಎಸ್‌ಡಿಪಿಐ ಪಕ್ಷಕ್ಕೆ ಅತೀ ಹೆಚ್ಚಿನ ರಾಜಕೀಯ ಶಕ್ತಿ ಇರುವ ಕ್ಷೇತ್ರ ಉಳ್ಳಾಲವಾಗಿದ್ದು ಈ ಕ್ಷೇತ್ರದ ವ್ಯಾಪ್ತಿಗೆ ಬರುವ ಎರಡು ಗ್ರಾಮ ಪಂಚಾಯತ್ ಗಳಲ್ಲಿ ಎಸ್‌ಡಿಪಿಐ ಆಡಳಿತ ಇದೆ. ಪಂಚಾಯತ್ ನಲ್ಲಿ 60 ಮಂದಿ ಸದಸ್ಯರಿದ್ದಾರೆ. ಸುಮಾರು 150 ಕಡೆಗಳಲ್ಲಿ ಎಸ್‌ಡಿಪಿಐ ಅಲ್ಪ ಮತದಿಂದ ಸೋಲಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೆ ಉಳ್ಳಾಲ ನಗರಸಭೆಯಲ್ಲಿ 6 ಮಂದಿ ಕೌನ್ಸಿಲರ್ ಗಳಿದ್ದಾರೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯತ್ ನಲ್ಲಿಯೂ ಎಸ್‌ಡಿಪಿಐ ಖಾತೆ ತೆರದಿದೆ, ಕ್ಷೇತ್ರಾದ್ಯಂತ ಎಸ್‌ಡಿಪಿಐ ಪಕ್ಷದ ಬೂತ್ ಕಮಿಟಿಗಳಿವೆ ಹೀಗಾಗಿ ಯುಟಿ ಖಾದರ್ ವಿರುದ್ಧ ಎಸ್‌ಡಿಪಿಐ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು, ಈ ಬಾರಿ ಉಳ್ಳಾಲವನ್ನು ಕರಾವಳಿಯಲ್ಲಿ ತನ್ನ ಗೆಲುವಿಗೆ ಮೆಟ್ಟಲನ್ನಾಗಿ ಮಾಡಬಹುದೇ ಎನ್ನುವ ಪ್ರಶ್ನೆ ಎದುರಾಗಿದೆ.

ಇನ್ನು ಬಿಜೆಪಿ ಕೂಡಾ ಇಲ್ಲಿ ಖಾದರ್ ವಿರುದ್ಧ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಹುಡುಕಾಟ ನಡೆಸುತ್ತಿದೆ.

ಆದರೆ ಖಾದರ್ ಮಾತ್ರ ಯಾವುದೇ ತಲೆ ಕೆಡಿಸಿಕೊಳ್ಳದೇ ತನ್ನ ಕೆಲಸ ಕಾರ್ಯಗಳನ್ನು ಯಾವುದೇ ಜಾತಿ, ಮತ, ಧರ್ಮ ಇಲ್ಲದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಉಳ್ಳಾಲ ಕ್ಷೇತ್ರದ ಚುನಾವಣಾ ಮಾತ್ರ ಈ ಬಾರಿ ರೋಚಕವಾಗಿರಲಿದೆ.