


ಡೈಲಿ ವಾರ್ತೆ:05 ಮಾರ್ಚ್ 2023


ಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕಾರು, ಕೆಲವರಿಗೆ ಗಾಯ
ಕಟಪಾಡಿ: ರಾಷ್ಟೀಯ ಹೆದ್ದಾರಿ 66ರ ಕಟಪಾಡಿ ಕಲ್ಲಾಪು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕಮರಿಗೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದವರು ಗಾಯಗೊಂಡಿರುವ ಘಟನೆ ರವಿವಾರ ಸಂಜೆಯ ವೇಳೆಯಲ್ಲಿ ಘಟಿಸಿದೆ. ಕೇರಳ ನೋಂದಣಿ ಹೊಂದಿರುವ ಕಾರಿನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದ್ದು, ಈ ಪೈಕಿ ಮಕ್ಕಳು ಮತ್ತು ಮಹಿಳೆಯರು ಗಾಯಗೊಂಡಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಸ್ಥಳೀಯರು ಮತ್ತು ಸಾರ್ವಜನಿಕರು ಗಾಯಳುಗಳನ್ನು ಆಸ್ಪತ್ರೆಗೆ ಕರೆದೋಯ್ಯುವಲ್ಲಿ ಸಹಕರಿಸಿದ್ದಾರೆ.