ಡೈಲಿ ವಾರ್ತೆ:08 ಮಾರ್ಚ್ 2023
ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಕಂದಾಯ ಅಧಿಕಾರಿ ಹಾಗೂ ಗುಮಾಸ್ತ!
ಚಿಕ್ಕಮಗಳೂರು: ಪುರಸಭೆ ಕಂದಾಯ ಅಧಿಕಾರಿ, ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಕಂದಾಯ ಅಧಿಕಾರಿ ಯೋಗೀಶ್, ಗುಮಾಸ್ತ ತಮ್ಮಯ್ಯ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಜಮೀನಿನ ಪೌತಿ ಖಾತೆ ಮಾಡಿಕೊಡಲು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು, ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪುರಸಭೆ ಕಚೇರಿ ಒಳಗೆಯೇ ಲೋಕಾಯುಕ್ತ ಬಲೆಗೆ ಅಧಿಕಾರಿ, ಸಿಬ್ಬಂದಿ ಬಿದ್ದಿದ್ದಾರೆ. ಲೋಲಾಯುಕ್ತ ಡಿ.ವೈ.ಎಸ್ಪಿ. ತಿರುಮಲೇಶ್, ಪಿ.ಎಸ್.ಐ. ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.