




ಡೈಲಿ ವಾರ್ತೆ:08 ಮಾರ್ಚ್ 2023




✒️ ಓಂಕಾರ ಎಸ್. ವಿ. ತಾಳಗುಪ್ಪ
ಸಾಗರದ ಬಲಿಜ ಸಮಾಜದ ವತಿಯಿಂದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಆಚರಣೆ

ಸಾಗರ: “ಶ್ರೀ ಶ್ರೀ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯನ್ನು ಸಾಗರದ ತಾಲೂಕು ಬಲಿಜ ಸಮಾಜದ ವತಿಯಿಂದ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.

ಶ್ರೀ ಗಜೇಂದ್ರ ಎಸ್ ಹೆಚ್ ಶ್ರೀ ಯೋಗಿ ನಾರೇಯಣ ಯತೀಂದ್ರರ ಉಪನ್ಯಾಸ ನೀಡಿದರು.
ಸಮಾಜದ ಬಳಸಗೊಡಿನ ಶ್ರೀಮತಿ ಸುಮಾ ಮತ್ತು ಶ್ರೀ ಸಂತೋಷ್ ರವರ ದ್ವಿತೀಯ ಕುಮಾರಿ ಯೋಗ ಪಟು ನಮನ ಎಸ್ ಇವಳಿಗೆ ಸಾಗರ ತಾಲೂಕು ಬಲಿಜ ಸಮಾಜದವತಿಯಿಂದ ಸನ್ಮಾನವನ್ನ ಮಾಡಲಾಯಿತು
ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲಾ, ಉಪತಹಸೀಲ್ದಾರ್ ಅಧ್ಯಕ್ಷತೆ ವಹಿಸಿದ್ದರು, ವಿನಯ ದೇವರಾಜ್ ಪ್ರಾರ್ಥಿಸಿದರು ಅದ್ಯಕ್ಷರಾದ ಸತೀಶ್ ರವರು ದೀಪಬೇಳಗಿಸಿ ಕೈವಾರ ತಾತಯ್ಯ ನವರ ಜಯಂತಿ ಯನ್ನ ಉದ್ಘಾಟಿಸಿದರು. ವಿ ಟಿ ಸ್ವಾಮಿ ಸಭೆಯನ್ನು ನಿರೂಪಿಸಿ. ಸ್ವಾಗತಿಸಿದರು ಸುಬ್ರಮಣ್ಯ ನಾಯ್ಡು ರವರು ವಂದಿಸಿದರು.

