ಡೈಲಿ ವಾರ್ತೆ:09 ಮಾರ್ಚ್ 2023

ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ದಂಪತಿಗಳು ಮೃತ್ಯು

ಗಾಜಿಯಾಬಾದ್: ಗ್ಯಾಸ್ ಗೀಸರ್ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ದಂಪತಿ ಸಾವನ್ನಪ್ಪಿರುವ ದುರಂತ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ.

ದೀಪಕ್ ಗೋಯಲ್ ತನ್ನ ಪತ್ನಿ ಶಿಲ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ಅಗ್ರಸೇನ್ ಮಾರುಕಟ್ಟೆಯಲ್ಲಿ ವಾಸಿಸುತ್ತಿದ್ದರು.ಹೋಳಿ ಹಬ್ಬದ ಸಂಭ್ರಮದಲ್ಲಿ ಹೋಳಿ ಆಡಿ ಬಂದಿದ್ದ ದಂಪತಿ ಗ್ಯಾಸ್ ಗೀಸರ್ ಆನ್ ಮಾಡಿ ಸ್ನಾನಕ್ಕೆಂದು ಹೋಗಿದ್ದಾರೆ.

ಗಂಟೆಗಳು ಕಳೆದರೂ ತಂದೆ-ತಾಯಿ ಹೊರಗೆ ಬಾರದಿದ್ದಾಗ ಮಕ್ಕಳು ಕೂಗಿಕೊಂಡಿದ್ದಾರೆ. ಕುಟುಂಬಸ್ಥರು ಅಲ್ಲಿಗೆ ಬಂದು ಪರಿಶೀಲಿಸಿದಾಗ ಗ್ಯಾಸ್ ಗೀಸರ್ ಆನ್​ ಆಗಿದ್ದು, ಇಬ್ಬರು ಕೂಡ ಉಸಿರುಗಟ್ಟಿ ಮೃತಪಟ್ಟಿರುವುದು ಕಂಡು ಬಂದಿದೆ.
ತಕ್ಷಣ ಇಬ್ಬರನ್ನೂ ಗಾಜಿಯಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.