ಡೈಲಿ ವಾರ್ತೆ:13 ಮಾರ್ಚ್ 2023

ಪ್ರತಿಭಟನಕಾರರನ್ನು ಮನವಲಿಸಲು ಬೆಂಗಳೂರಿಂದ ದೌಡಯಿಸಿ ಬಂದ ಸಚಿವ ಕೋಟ :ಸಂಧಾನ ಕಾರ್ಯ ವಿಫಲ.!

ಕೋಟ:1989ರಲ್ಲಿ ದಲಿತರಿಗಾಗಿ ತಂದ ದೌರ್ಜನ್ಯ ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ಮಾ. 13 ರಂದು ಸೋಮವಾರ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮನೆ ಮುಂದೆ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರು ವತಿಯಿಂದ ನಡೆದ ಧರಣಿ ನಿರತರ ಮನವೊಲಿಸಲು ಬೆಂಗಳೂರಿಂದ ದೌಡಯಿಸಿ ಬಂದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಸಂಧಾನ ಕಾರ್ಯ ವಿಫಲವಾಗಿದೆ.


ಸಚಿವರು ಪ್ರತಿಭಟನಕಾರರ ಮನವೊಲಿಸಿ ಮಾ.15 ರಂದು ವಿಧಾನಸೌಧದಲ್ಲಿ ಚರ್ಚೆ ಮಾಡಿ ಬೇಡಿಕೆಗಳನ್ನು ಈಡೇರಿಸುದಾಗಿ ಕೇಳಿಕೊಂಡರು. ಆದರೆ ಅದಕ್ಕೆ ಒಪ್ಪದೇ ಧರಣಿ ನಿರತರು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಸಚಿವರ ಮನೆ ಬಿಟ್ಟು ಹೋಗುವ ಪ್ರೆಶ್ನೆಯೇ ಇಲ್ಲ ಅಂತ ಪಟ್ಟು ಹಿಡಿದರು. ಇದರಿಂದಾಗಿ ಸಚಿವರು ಪ್ರತಿಭಟನಕಾರರಿಗೆ ಮಣಿದು ಅವರಿಗೆ ವಾಸ್ತವ್ಯಕ್ಕೆ ಹಾಗೂ ಊಟಕ್ಕೆ ವ್ಯವಸ್ಥೆ ಮಾಡಿಕೊಟ್ಟರು.