ಡೈಲಿ ವಾರ್ತೆ:17 ಮಾರ್ಚ್ 2023

ಶಿವಮೊಗ್ಗ ಹಳೆ ರೈಲ್ವೆ ನಿಲ್ದಾಣದ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ.

ಶಿವಮೊಗ್ಗ:ಶಿವಮೊಗ್ಗ ಹಳೆ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೆ ಹಳಿಯಲ್ಲಿ ಸುಮಾರು 50 ರಿಂದ 55 ವಯಸ್ಸಿನ ಅಪರಿಚಿತ ಗಂಡಸ್ಸಿನ ಮೃತದೇಹವು ಮಾ. 17 ರಂದು ಬೆಳಿಗ್ಗೆ ಪತ್ತೆಯಾಗಿದೆ.

ಮೃತದೇಹವನ್ನು ವಾರಿಸುದಾರರ ಪತ್ತೆ ಕುರಿತು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ಕಳಿಸಲಾಗಿದೆ.

ಮೃತನ ಚಹರೆ ಪಟ್ಟಿ ವಿವರ:
ಅಪರಿಚಿತ ಗಂಡಸ್ಸು ವಯಸ್ಸು 50 ರಿಂದ 55 ವರ್ಷ.
ಸುಮಾರು 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು ಕೂದಲು ಬಿಟ್ಟಿರುತ್ತಾರೆ.
ಬಿಳಿ ಕಪ್ಪು ಗಡ್ಡ ಮೀಸೆ, ಬಲ ಗೈ V & ಆಂಜನೇಯ ಮೂರ್ತಿ ಹಚ್ಚೆ ಹಾಕಿಸಿರುತ್ತಾರೆ.

ಈ ಮೇಲ್ಕಂಡ ಚಹರೆಯ ಗಂಡಸ್ಸಿನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರನ್ನು ಸಂಪರ್ಕಿಸಲು ಕೋರಲಾಗಿದೆ.
ಫೋನ್ ನೋ.: 0818222974
ಮೊಬೈಲ್: 948082124