ಡೈಲಿ ವಾರ್ತೆ:18 ಮಾರ್ಚ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸಾರಥ್ಯದಲ್ಲಿ ಯಶಸ್ವಿಯಾಗಿ ನೆಡೆದ ” ಜಿಲ್ಲಾಧಿಕಾರಿ ನಡೆ – ಹಳ್ಳಿ ಕಡೆ ” ಕಾರ್ಯಕ್ರಮ

ಸಾಗರ: ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸಾರಥ್ಯದಲ್ಲಿ ” ಜಿಲ್ಲಾಧಿಕಾರಿ ನಡೆ – ಹಳ್ಳಿ ಕಡೆ ” ಕಾರ್ಯಕ್ರಮವು ಮಾ. 18 ರಂದು ಶನಿವಾರ ಯಶಸ್ವಿಯಾಗಿ ನೆಡೆಯಿತು.

ಸೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸದಸ್ಯರು ಎಲ್ಲಾರ ಸಹಕಾರದಿಂದ ಜಿಲ್ಲಾಧಿಕಾರಿಯವರು ಗ್ರಾಮದ ಎಲ್ಲಾ ಕಡೆ ಸ್ಥಳ ವೀಕ್ಷಿಸಿ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದರು. ಮತ್ತು ಗ್ರಾಮಸ್ಥರು ಹಲವಾರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಅರ್ಜಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಯು ನಿಮ್ಮ ಅರ್ಜಿಗಳನ್ನು ಆಯಾಯ ಇಲಾಖೆಗೆ ತಲುಪಿಸಿ ಅದನ್ನು ಒಂದು ವಾರದಲ್ಲಿ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿದ್ದಾರೆ ನನಗೆ ಗಂಡು ಮಗು ಆಗಲಿದೆ ಎಂದು ತಿಳಿಸಿದ ತುಂಬು ಗರ್ಭಿಣಿಯ ಮಾತು ಕೇಳಿ ದಂಗಾದ ಡಾ. ಸೇಲ್ವಮಣಿ. ಜಿಲ್ಲಾಧಿಕಾರಿ ಕೂಡಲೇ ತನಿಖೆಗೆ ಆದೇಶ ನೀಡಿದ ಪ್ರಸಂಗ ನಡೆಯಿತು.