ಡೈಲಿ ವಾರ್ತೆ:18 ಮಾರ್ಚ್ 2023
ಮೂಳೂರು:ಓವರ್ ಟೇಕ್ ಭರದಲ್ಲಿ ಡಿವೈಡರ್ ಮೇಲೇರಿದ ಬಸ್
ಕಾಪು: ಎರಡು ಬಸ್‌ಗಳ ಓವರ್‌ಟೇಕ್ ಭರದಲ್ಲಿ ಬಸ್‌ವೊಂದು ಡಿವೈಡರ್ ಮೇಲೇರಿದ ಘಟನೆ ಉಚ್ಚಿಲ ಸಮಿಪದ ಮೂಳೂರು ವೆಸ್ಟ್ ಕೊಸ್ಟ್ ನರ್ಸರಿ ಬಳಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುವ ಒಂದೇ ಹೆಸರಿನ ಎರಡು ಬಸ್‌ಗಳು ಓವರ್ ಟೆಕ್ ಮಾಡಿಕೊಂಡು ಬಂದು ಮೂಳೂರು ಬಳಿ ಸರ್ವಿಸ್ ರಸ್ತೆಯ ಪಕ್ಕದ ಡಿವೈಡರ್ ಮೇಲೇರಿದೆ.
ಘಟನೆಯಿಂದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.