ಡೈಲಿ ವಾರ್ತೆ:24 ಮಾರ್ಚ್ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾ: ವಶಪಡಿಸಿಕೊಂಡಿದ್ದ 11.50 ಲಕ್ಷ ರೂ. ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ದಹಿಸಲಾಯಿತು
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ
ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳನ್ನು ನ್ಯಾಯಾಲಯದ
ಆದೇಶದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಎನ್. ನೇತೃತ್ವದಲ್ಲಿ ತಾಲೂಕಿನ ಬೊಗ್ರಿಬೈಲ್‍ನ ಕೆನರಾ ಐ.ಎಂ.ಎ.(ಯು.ಕೆ.)ಕಾನ್ ಟ್ರೀಟ್‍ಮೆಂಟ್ ಫೆಸಿಲಿಟಿರವರ ಘನತ್ಯಾಜ್ಯ ವಿಲೇವರಿ ಘಟಕದಲ್ಲಿ ಒಟ್ಟು
11.50ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಶುಕ್ರವಾರ
ದಹಿಸಲಾಯಿತು.
ಠಾಣಾವಾರು ಪ್ರಕರಣ : ಕಾರವಾರ ಉಪವಿಭಾಗದÀ ಕಾರವಾರ ನಗರ 2, ಕಾರವಾರ ಗ್ರಾಮೀಣ 1, ಅಂಕೋಲಾ 6, ಭಟ್ಕಳ ಉಪವಿಭಾಗದ ಹೊನ್ನಾವರ 3, ಕುಮಟಾ 5, ಭಟ್ಕಳ ಗ್ರಾಮೀಣ 1, ಗೋಕರ್ಣ 4, ಮಂಕಿ 2, ಶಿರಸಿ ಉಪವಿಭಾಗದÀ ಬನವಾಸಿ 2, ಶಿರಸಿ ಗ್ರಾಮೀಣ 2, ಮುಂಡಗೋಡ 5, ಶಿರಸಿ ನಗರ 3, ಯಲ್ಲಾಪುರ 3, ದಾಂಡೇಲಿ ಉಪವಿಭಾಗದ ಹಳಿಯಾಳ 6, ದಾಂಡೇಲಿ ನಗರ 4, ದಾಂಡೇಲಿ ಗ್ರಾಮೀಣ 2 ಸೇರಿದಂತೆ ಒಟ್ಟು 51 ಪ್ರಕರಣದಲ್ಲಿ 11,00,300 ರೂ.
ಮೌಲ್ಯದ 47.844 ಕೆ.ಜಿ.ಗಾಂಜಾ, 50 ಸಾವಿರ ರೂ.ಮೌಲ್ಯದ 150 ಗಾಂಜಾ ಗಿಡಗಳನ್ನು ನಾಶಪಡಿಸಲಾಯಿತು.
ಎಸ್ಪಿ ವರದಿಗಾರರೊಂದಿಗೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಸಂಗ್ರಹದ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಕೆಲವು ತಾಲೂಕುಗಳಲ್ಲಿ ಹೆಚ್ಚು ಪ್ರಕರಣವಾದರೆ ಇನ್ನು ಕೆಲವು ತಾಲೂಕುಗಳಲ್ಲಿ ಕಡಿಮೆ ಇವೆ. ಅಪರಾಧ ಕೃತ್ಯ ದಲ್ಲಿ ಯಾರೇ ಪಾಲ್ಗೊಂಡರೂ ಅಂತವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಆರ್‍ಬಿ ಡಿವೈಎಸ್ಪಿ ವಿಜಯಪ್ರಸಾದ, ವಿವಿಧ ಉಪವಿಭಾಗದ ಡಿವೈಎಸ್ಪಿಗಳಾದ ವೆಲೆಂಟೈನ್ ಡಿಸೋಜಾ ಕಾರವಾರ, ಶ್ರೀಕಾಂತ ಕೆ. ಭಟ್ಕಳ, ಕೆ.ಎಲ್.ಗಣೇಶ ಶಿರಸಿ, ಶಿವಾನಂದ ಕಟಗಿ ದಾಂಡೇಲಿ, ವಿವಿಧ ತಾಲೂಕಿನ ಪಿಐ ಗಳಾದ
ಜಾಕ್ಸನ್ ಡಿಸೋಜಾ ಅಂಕೋಲಾ, ತಿಮ್ಮಪ್ಪ ನಾಯ್ಕ ಕುಮಟಾ, ಮಂಜುನಾಥ ಇ.ಒ. ಹೊನ್ನಾವರ, ಮಂಜುನಾಥ ನಾಯಕ ಶಿರಸಿ, ಮಂಜುನಾಥ ಭಟ್ಕಳ, ಗೋಪಿಕೃಷ್ಣ ಭಟ್ಕಳ, ಸೀತಾರಾಮ ಶಿರಸಿ, ಕುಮಾರ ಕೆ. ಸಿದ್ದಾಪುರ, ಪಿಎಸ್‍ಐ ಗಳಾದ ಮಹಾಂತೇಶ ವಾಲ್ಮಕಿ ಅಂಕೋಲಾ, ಚಂದನ ಗೋಪಾಲ ಭಟ್ಕಳ, ಅಶೋಕ ಮಾಳಬಾರಿ ಸಿಬ್ಬಂದಿಗಳಾದ ಚಂದನ ಮಾಂಜ್ರೇಕರ್, ನಾಗೇಶ
ಹರಿಕಂತ್ರ, ಪುನೀತ ನಾಯ್ಕ, ಚಂದ್ರಕಾಂತ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.