ಡೈಲಿ ವಾರ್ತೆ:25 ಮಾರ್ಚ್ 2023
ಕಲಬುರಗಿ ಪಂಚಾಯತ್ ಕಚೇರಿಯಲ್ಲಿ ಬೆಂಕಿ ಅವಘಡ: ಪ್ರಮುಖ ದಾಖಲೆಗಳು ಭಸ್ಮ.!
ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪ್ರಮುಖ ದಾಖಲೆಗಳು ಭಸ್ಮವಾಗಿವೆ ಜಿಲ್ಲಾ ಪಂಚಾಯತ್ ಕಚೇರಿಯ ಲೆಕ್ಕಪತ್ರ ವಿಭಾಗ, ಯೋಜನಾ ವಿಙಾಗ, ಸಿಇಒ ಕಚೇರಿಯಲ್ಲಿನ ದಾಖಲಾತಿಗಳು ಬೆಂಕಿಗಾಹುತಿಯಾಗಿವೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಪ್ರಮುಖ ದಾಖಲಾತಿಗಳು ಸುಟ್ಟು ಕರಕಲಾಗಿವೆ. ಕಂಪ್ಯೂಟರ್ ಸಹ ಸುಟ್ಟಿವೆ. ಮಾರ್ಚ್ ಅಂತ್ಯವಾಗಿರುವುದರಿಂದ ದಾಖಲೆಗಳು ನಾಶಪಡಿಸಲು ಬೆಂಕಿ ಹಚ್ಚಲಾಗಿದೆಯೇ ಆರೋಪ ಕೇಳಿ ಬರುತ್ತಿದೆ.
ಅಗ್ನಿ ಶಾಮಕದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.