ಡೈಲಿ ವಾರ್ತೆ:29 ಮಾರ್ಚ್ 2023

ಬಜಪೆ: ಮಿಸಲಾತಿ ರದ್ಧತಿ ವಿರುದ್ಧ ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ

ಬಿ.ಜೆ.ಪಿ. ಸರಕಾರದ ಧ್ವೇಷದ ಭಾಗವಾಗಿ ಮುಸ್ಲಿಮರ 2ಬಿ ಮೀಸಲಾತಿಯನ್ನು ರದ್ದು ಪಡಿಸಿದ್ದ ವಿರುದ್ಧವಾಗಿ ಹಾಗೂ ಮೀಸಲಾತಿಯನ್ನು ಪುನರ್ ಸ್ಥಾಪಿಸಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರದ ವತಿಯಿಂದ ಬಜಪೆ ಕಿನ್ನಿಪದವು ಜಂಕ್ಷನ್ ನಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ನೇತ್ರತ್ವವನ್ನು ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ವಹಿಸಿದ್ದರು.



ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋರವರು ಬಿ.ಜೆ.ಪಿ. ಸರಕಾರದ ಧ್ವೇಷದ ಭಾಗವಾಗಿ 2ಬಿ ಮೀಸಲಾತಿಯನ್ನು ರದ್ದು ಪಡಿಸಿರುವುದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಧರ್ಮದವರು ಹಂತ ಹಂತವಾಗಿ ಅನುಭವಿಸಲಿಕ್ಕಿದ್ದಾರೆ, ಅದಕ್ಕೂ ಮೊದಲೇ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವುದು ಒಳಿತು ಎಂದರು. ಇನ್ನು ಜಾತ್ಯಾತೀತ ಎನಿಸಿಕೊಳ್ಳುವವರು ಇದರ ಬಗ್ಗೆ ತೀರಾ ಮೌನ ವಹಿಸಿರುವುದು ದೇಶದ ಪ್ರಜಾಪ್ರಭುತ್ವದ ದುರಂತವಾಗಿದೆ ಎಂದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಅಡ್ಡೂರು ಮಾತನಾಡುತ್ತಾ ಬಿ.ಜೆ.ಪಿ.ಯ ಕೋಮುವಾದದ ವಿರುದ್ಧ ನಾವೂ ತೀವ್ರ ಹೋರಾಟಗಳನ್ನು ಸಂಘಟಿಸಲಿದ್ದೇವೆ. ಹಾಗೆಯೇ ಮೀಸಲಾತಿ ರದ್ಧತಿ ವಿರುದ್ಧ ಹೈಕೋರ್ಟ್ ಮೊರೆ ಹೋಗಲಿದ್ದೇವೆ ಎಂದರು. ಇನ್ನು ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಎಸ್.ಡಿ‌.ಪಿ.ಐ ಅಭ್ಯರ್ಥಿಗಳನ್ನು ಬೆಂಬಲಿಸಿ ವಿಜಯಗೊಲಿಸಿ, ಖಂಡಿತಾ ಎಸ್.ಡಿ.ಪಿ.ಐಯೂ ಸದನದಲ್ಲಿ ಬಿ.ಜೆ.ಪಿ‌ಯ ಕೋಮುವಾದದ ವಿರುದ್ಧ ಶಕ್ತಿಯುತವಾಗಿ ಎದುರಿಸಲಿದ್ದೇವೆ ಎಂದು ನುಡಿದರು.

ಪ್ರತಿಭಟನಾ ಪ್ರದರ್ಶನದಲ್ಲಿ ಪಕ್ಷದ ಮೂಡಬಿದರೆ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ನಿಸಾರ್ ಮರವೂರು, ಬಜಪೆ ಬ್ಲಾಕ್ ಅಧ್ಯಕ್ಷರಾದ ರಹೀಂ ಕಳವಾರು, ಕಾರ್ಯದರ್ಶಿ ನಝೀರ್ ಬಜ್ಪೆ, ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್, ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.