ಡೈಲಿ ವಾರ್ತೆ:02 ಏಪ್ರಿಲ್ 2023
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೃತ ನವಜಾತ ಶಿಶುವನ್ನ ಕಚ್ಚಿಕೊಂಡು ಬಂದ ನಾಯಿ
ಶಿವಮೊಗ್ಗ: ಮೃತ ನವಜಾತ ಹೆಣ್ಣು ಶಿಶುವನ್ನು ನಾಯಿ ಕಚ್ಚಿಕೊಂಡು ಬಂದ ಘಟನೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಡೆದಿದ್ದು. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿ ನವಜಾತ ಹೆಣ್ಣು ಶಿಶುವೊಂದನ್ನ ನಾಯಿಯೊಂದು ಕಚ್ಚಿಕೊಂಡು ಬಂದಿದ್ದು, ನಾಯಿಯನ್ನ ಅಲ್ಲಿನ ಸೂಪರ್ ವೈಜರ್ ಓಡಿಸಿ ಮೃತ ಶಿಶುವನ್ನು ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿರುವ ಜಾಗಕ್ಕೆ ತಂದು ಹಾಕಿದ್ದಾರೆ.
ಮಗುವಿನ ಜನನವನ್ನ ಮರೆಮಾಚುವ ಉದ್ದೇಶದಿಂದಲೋ, ಅಥವಾ ಬೇರೆಯಾವುದೋ ಉದ್ದೇಶದಿಂದ ಮೆಗ್ಗಾನ್ ನ ಪೆಡೆಯಾಟ್ರಿಕ್ ವಾರ್ಡ್ ಹಿಂಭಾಗ ಬಿಟ್ಟು ಹೋಗಿದ್ದಾರೆ. ಜೀವ ಕಳೆದುಕೊಂಡ ಮಗುವನ್ನ ನಾಯಿ ಕಚ್ಚಿಕೊಂಡು ಮೆಗ್ಗಾನ್ ಆವರಣಕ್ಕೆ ತೆಗೆದುಕೊಂಡು ಬಂದಿದೆ.
ಈ ಹಿನ್ನಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.