


ಡೈಲಿ ವಾರ್ತೆ:02 ಏಪ್ರಿಲ್ 2023


Breaking:ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕಾರ್ಕಳ ಕಾಂಗ್ರೆಸ್ ನಿಂದ ಬೈಂದೂರು ಬಿಜೆಪಿಗೆ ನೆಗೆತ !?
ಕಾರ್ಕಳದ ಬಹುದೊಡ್ಡ ಗುತ್ತಿಗೆದಾರ ಕಾಂಗ್ರೆಸ್‌ನ ಹುರಿಯಾಳು ಉದಯ್ ಕುಮಾರ್ ಶೆಟ್ಟಿ ಕಾಂಗ್ರೆಸ್ ನಿಂದ ಕಾರ್ಕಳದಲ್ಲಿ ಟಿಕೇಟ್ ಬಹುತೇಕ ಖಚಿತ ಆದಂತಿದೆ.ಆದರೆ.., ಮುಂಬಯಿ ಬಂಟ್ ಸಂಘ ಕ್ಕೆ ಒತ್ತಡ ತಂದು ಬೈಂದೂರಲ್ಲಿ ಬಿಜೆಪಿಯಿಂದ ನಿಲ್ಲಲು ಬಿಜೆಪಿ ರಾಜ್ಯಾದಕ್ಷರಿಂದ ಒತ್ತಡ ಹಾಕುತ್ತಿದ್ದಾರಂತೆ. ಬೈಂದೂರಿನಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿದ್ದತೆ ನಡೆಸುತ್ತಿದ್ದಾರಂತೆ. ಸುಮಾರು ನಾಲ್ಕು ವರ್ಷದಿಂದ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಮುನಿಯಾಲು ಈಗ ಬಿಜೆಪಿ ಯಲ್ಲಿ ಗುರುತಿಸಿಕೊಳ್ಳಲು ಮನ ಮಾಡಿದರೆ? ಈ ಸುದ್ದಿ ಈಗ ರಾಜಕೀಯ ವಲಯದಲ್ಲಿ ಬಹಳಷ್ಟು ಹಲ್ ಚಲ್ ಎಬ್ಬಿಸಿದ್ದು ಎರಡು ಕ್ಷೇತ್ರದಲ್ಲಿ ಕದನ ಕುತೂಹಲ ಕೌತುಕ ಗೊಂಡಿದೆ