



ಡೈಲಿ ವಾರ್ತೆ:06 ಏಪ್ರಿಲ್ 2023


ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರದಲ್ಲೇ ವಿಡಿಯೋ ಕಾಲ್ ಮೂಲಕ ತಂದೆಯ ಅಂತ್ಯ ಸಂಸ್ಕಾರವನ್ನು ನೋಡಿದ ಮಗಳು!
ಶಿವಮೊಗ್ಗ;ಎಸ್‌ಎಸ್‌ಎಲ್ಸಿ ಪರೀಕ್ಷೆ ಸಮಯದಲ್ಲಿ ರಾಜ್ಯದಲ್ಲಿ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದ್ದು, ಪರೀಕ್ಷಾ ಕೇಂದ್ರದಲ್ಲೇ ವಿಡಿಯೋ ಕಾಲ್ ಮೂಲಕ ಮಗಳು ತಂದೆಯ ಅಂತ್ಯ ಸಂಸ್ಕಾರವನ್ನು ನೋಡಿದ್ದಾಳೆ ಎಂದು ವರದಿಯಾಗಿದೆ.
ಮನಿಯಾರ್ ಕೊಪ್ಪಳದ ನಿವಾಸಿ ಆರ್ಶೀಯಾ ಶಿವಮೊಗ್ಗದ ಹೊಸನಗರ ತಾಲೂಕಿನ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ಓದುತ್ತಿದ್ದಾರೆ.
ಇಂದು ಇಂಗ್ಲೀಷ್ ಪರೀಕ್ಷೆ ಇತ್ತು. ಆದರೆ ನಿನ್ನೆ ರಾತ್ರಿ ಆಕೆಯ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಸತಿ ಶಾಲೆಯ ಶಿಕ್ಷಕರು ಆರ್ಶೀಯಾಳನ್ನು ಕೊಪ್ಪಳಕ್ಕೆ ಕರೆದೊಯ್ದರು. ತಂದೆಯ ಅಂತಿಮ ದರ್ಶನ ಮಾಡಿಸಿ, ಬಳಿಕ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಆದರೆ ಶವಸಂಸ್ಕಾರಕ್ಕೆ ಸಮಯವಾಗಿದ್ದ ಕಾರಣ, ಪರೀಕ್ಷೆ ಮುಗಿದ ಕೂಡಲೇ ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮೂಲಕ
ತಂದೆಯ ಅಂತ್ಯಸಂಸ್ಕಾರ ತೋರಿಸಲಾಗಿದೆ ಎಂದು ವರದಿಯಾಗಿದೆ.