ಡೈಲಿ ವಾರ್ತೆ:12 ಏಪ್ರಿಲ್ 2023

ಎಕ್ಸಲೆಂಟ್ ಪಿ.ಯು ಕಾಲೇಜ್, ಕುಂದಾಪುರ ಸ್ಪರ್ಧಾತ್ಮಕ ಪರೀಕ್ಷೆಗೆ ಗುಣಮಟ್ಟದ ತರಬೇತಿ

ಕುಂದಾಪುರ:- ಎಂ.ಎಂ. ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‍ನ ಅಂಗಸಂಸ್ಥೆ ಎಕ್ಸಲೆಂಟ್ ಪಿ.ಯು ಕಾಲೇಜ್ ಕುಂದಾಪುರ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಹೊಸ ಆಡಳಿತದೊಂದಿಗೆ ಕಳೆದ ಕೆಲವು ವರ್ಷಗಳಿಂದ ಪಿಯುಸಿ ವಿಜ್ಞಾನ ವಿಭಾಗದ ಪಿಸಿಎಮ್‍ಬಿ, ಪಿಸಿಎಮ್‍ಸಿ, ಪಿಸಿಎಮ್‍ಎಸ್ ಮತ್ತು ವಾಣಿಜ್ಯ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಸ್ಟಾಟಿಸ್ಟಿಕ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಿ.ಯು.ಸಿ ಶಿಕ್ಷಣವನ್ನು ನೀಡುತ್ತಾ ಪಿ.ಯು.ಸಿ ವಿಭಾಗದಲ್ಲಿ ರಾಜ್ಯಕ್ಕೆ ಅನೇಕ ರ್ಯಾಂಕ್‍ಗಳನ್ನು ನೀಡಿರುವ ಪ್ರತಿಷ್ಠಿತ ಎಕ್ಸಲೆಂಟ್ ಪಿ.ಯು ಕಾಲೇಜ್ ಕುಂದಾಪುರ, ವಿದ್ಯಾರ್ಥಿಗಳಿಗೆ ಪಿ.ಯು.ಸಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ.ಇ.ಟಿ/ನೀಟ್, ಜೆಇಇ ಮತ್ತು ಸಿ.ಎ./ ಸಿ.ಎಸ್ ಪೌಂಡೇಶನ್ ಕೋರ್ಸುಗಳಿಗೆ ಅನುಭವಿ ತರಬೇತುದಾರರಿಂದ ನಿರಂತರ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಮೇ 7 ರಂದು ನಡೆಯುವ ನೀಟ್ ಮತ್ತು ಮೇ 20,21 ರಂದು ನಡೆಯುವ ಸಿ.ಇ.ಟಿ ಪರೀಕ್ಷೆಗೆ ಸನ್ನದ್ದುಗೊಳಿಸುತ್ತಾ, ಜೆಇಇ ಎರಡನೇ ಹಂತದ ಪರಿಕ್ಷೆಗೆ ತರಬೇತಿ ನೀಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತಾ ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುವ ಕೆಲಸಕ್ಕೆ ಕೈ ಹಾಕಿದೆ.

ಅನುಭವಿ ಶಿಕ್ಷಕರ ತಂಡ:-
ಮೂಡುಬಿದರಿಯ ಪ್ರತಿಷ್ಠತ ಶಿಕ್ಷಣ ಸಂಸ್ಥೆಯಲ್ಲಿ 21 ವರ್ಷಗಳು ಪ್ರಾಶುಂಪಾಲರಾಗಿ ಸೇವೆ ಸಲ್ಲಿಸಿರುವ ಡಾ. ರಮೇಶ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಸಿ.ಎ./ ಸಿ.ಎಸ್ ತರಬೇತಿ ಸಂಸ್ಥೆ ಶಿಕ್ಷಪ್ರಭಾ ಅಕಾಡೆಮಿಯ ಸ್ಥಾಪಕರುಗಳಾದ ಪ್ರತಾಪಚಂದ್ರ ಶೆಟ್ಟಿ ಮತ್ತು ಭರತ್À ಶೆಟ್ಟಿಯವರು ಕಾರ್ಯದರ್ಶಿ ಹಾಗೂ ಖಜಾಂಚಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್‍ನ್ನು ಅನುಭವಿ ಭೋಧಕ ಸಿಬ್ಬಂದಿಗಳ ತಂಡ ನಿರಂತರವಾಗಿ ವಿದ್ಯಾರ್ಥಿಗಳಿಗೊಸ್ಕರ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು, ಮೂಡುಬಿದರಿ, ಬೆಂಗಳೂರು, ರಾಜಸ್ಥಾನದ ಕೋಟ, ಆಂದ್ರಪ್ರದೇಶದಂತಹ ಪ್ರತಿಷ್ಠಿತ ನಗರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ತಂಡ ಸಿ.ಇ.ಟಿ/ನೀಟ್, ಜೆಇಇ ಪರೀಕ್ಷೆಗೆ ಸುಮಾರು ವರ್ಷಗಳಿಂದ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ ಅನುಭವ ಕುಂದಾಪುರದ ಎಕ್ಸಲೆಂಟ್ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.

ವಸತಿಯೊಂದಿಗೆ ಶಿಕ್ಷಣ:
ಎಕ್ಸಲೆಂಟ್ ಪಿ.ಯು ಕಾಲೇಜು ಕುಂದಾಪುರದಲ್ಲಿ ಉತ್ತಮ ವಸತಿಯೊಂದಿಗೆ ಶಿಕ್ಷಣ ಪಡೆಯುವ ಅವಕಾಶವಿದ್ದು ಬೆಳಿಗ್ಗೆÉ 5 ಗಂಟೆಗೆ ಯೋಗ ಹಾಗೂ ಧ್ಯಾನದೊಂದಿಗೆ ಆರಂಭವಾಗುವ ವಿದ್ಯಾರ್ಥಿಗಳ ದಿನಚರಿ ರಾತ್ರಿ 10.30ಕ್ಕೆ ಅಂತ್ಯವಾಗುತ್ತದೆ. ಓದುವ ಸಮಯ ಸಂಪೂರ್ಣ ಬೋಧಕ ಸಿಬ್ಬಂದಿಗಳ ಉಪಸ್ಥಿತಿಯೊಂದಿಗೆ ನಡೆಯುತ್ತದೆ.
ಗುಣಮಟ್ಟದ ಊಟ, ಉಪಚಾರ, ವಸತಿಯ ಸೌಲಭ್ಯವಿದ್ದು ಅನುಭವಿ ಬೋಧಕ ಸಿಬ್ಬಂದಿಗಳೂ ಕೂಡ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಅವರ ಸಂಶಯ ನಿವಾರಣೆ ಮತ್ತು ಹೆಚ್ಚಿನ ತರಬೇತಿಗೆ ಸಹಕಾರಿಯಾಗಲಿದ್ದಾರೆ. ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಶಿಸ್ತು, ಸಂಯಮವನ್ನು ಕಲಿತು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒಲವನ್ನು ರೂಡಿಸಿಕೊಂಡು ತಮ್ಮ ವಿದ್ಯಾರ್ಥಿ ಜೀವನದ ಹೊಸ ರೂಪವನ್ನು ಕಂಡುಕೊಂಡಿದ್ದಾರೆ.

ಕೆಲವೇ ಸಿಟುಗಳು ಲಭ್ಯ:
ಎಕ್ಸಲೆಂಟ್ ಕಾಲೇಜು ಕುಂದಾಪುರದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಈಗಾಗಲೇ ದಾಖಲಾತಿ ನೋಂದಣಿ ಆರಂಭವಾಗಿದ್ದು ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆಗೈಯುವ ಕನಸನ್ನು ಹೊಂದಿರುವ ವಿದ್ಯಾರ್ಥಿಗಳು ಕುಂದಾಪುರದ ಹಾಲಾಡಿ-ಕೋಟೆಶ್ವರ ರಸ್ತೆಯಲ್ಲಿರುವ ಎಕ್ಸಲೆಂಟ್ ಪಿ.ಯು ಕಾಲೇಜಿಗೆ ಭೇಟಿ ನೀಡಬಹುದು.
ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಕ್ಷೇತ್ರ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆ ಗೈದ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕ್ಯಾಂಪಸ್‍ಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.