ಡೈಲಿ ವಾರ್ತೆ:15 ಏಪ್ರಿಲ್ 2023

ದಕ್ಷಿಣ ಕನ್ನಡ : ಹೃದಯಾಘಾತದಿಂದ 29 ವರ್ಷದ ಯುವಕ ಮೃತ್ಯು

ಬಂಟ್ವಾಳ: ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹೃದಯಾಘಾತದಿಂದ ಅವಿವಾಹಿತ ಯುವಕ ಮೃತಪಟ್ಟಿರುವ ಘಟನೆ ಇಲ್ಲಿನ ಬಂಟ್ವಾಳದ ಸಮೀಪ ಲೊರೆಟ್ಟೋ ಎಂಬಲ್ಲಿ ವರದಿಯಾಗಿದೆ.

ಲೊರೊಟ್ಟೋ ನಿವಾಸಿ ಧೀರಜ್ (29) ಮೃತಪಟ್ಟ ಯುವಕ.
ಇವರು ವೃತ್ತಿಯಲ್ಲಿ ಚಾಲಕನಾಗಿದ್ದ. ಧೀರಜ್ ರಾತ್ರಿ ಊಟ ಮಾಡಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಕಂಡು ಬಂದಿದೆ .

ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಧೀರಜ್ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.