ಡೈಲಿ ವಾರ್ತೆ:16 ಏಪ್ರಿಲ್ 2023

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ನಲಿಕಲಿ ಯಕ್ಷ ಶಿಬಿರಕ್ಕೆ ಚಾಲನೆ

ಕೋಟ: ಮನಸ್ಸು ನಿರ್ಮಲವಾಗಿರಲು ಕಲೆ, ಸಾಹಿತ್ಯ, ಸಂಸ್ಕೃತಿ ಮುಖ್ಯ. ಯಕ್ಷಗಾನ ಕಲಾಕೇಂದ್ರಗಳಂತಹ ಸಂಸ್ಥೆಗಳಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಾಣಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ಭಾನುವಾರ 15 ದಿನಗಳ ಬೇಸಿಗೆ ಯಕ್ಷಗಾನ ಕಲಿಕಾ ಶಿಬಿರ ನಲಿಕುಣಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಕ್ಷ ಗುರು ಸದಾನಂದ ಐತಾಳ ಮಾತನಾಡಿ ಲಲಿತಕಲೆಗಳು ಮನುಷ್ಯನಲ್ಲಿ ಸಂಸ್ಕಾರ ಬೆಳೆಸುತ್ತದೆ. ನೈತಿಕ ಶಿಕ್ಷಣ ಮತ್ತು ಮನೆ ಶಾಲೆಯಲ್ಲಿ ಸಿಗದ ಸಂಸ್ಕಾರ ಮಕ್ಕಳಿಗೆ ಇಂತಹ ಶಿಬಿರಗಳಿಂದ ಸಿಗುತ್ತದೆ ಎಂದರು.
ಇದಕ್ಕೂ ಮುನ್ನ ನಿವೃತ್ತ ಬ್ಯಾಂಕ್ ಅಧಿಕಾರಿ ವಿಷ್ಣುಮೂರ್ತಿ ಹೊಳ್ಳ ಶಿಬಿರವನ್ನು ಉದ್ಘಾಟಿಸಿದರು.
ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ‌ಕುಂದರ್  ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಕಲಾಸಕ್ತ ಸೀತಾರಾಮ ಶೆಟ್ಟಿ ಇದ್ದರು.
ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ತಾಲ್ಲೂಕು ‌ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು.