ಡೈಲಿ ವಾರ್ತೆ:29 ಏಪ್ರಿಲ್ 2023
ಸಾಲಿಗ್ರಾಮ ಪರಿಸರದ ಹಿರಿಯ ವೈದ್ಯ ಡಾ.ಕೆ.ವಿ ತುಂಗ ಇವರಿಗೆ ಕೋಟದ ಪಂಚವರ್ಣ ಸಂಸ್ಥೆ ರಜತ ಗೌವರ ಪ್ರದಾನಿಸಿತು.
ವೈದ್ಯಕೀಯ ಲೋಕಕ್ಕೆ ವಿಶ್ವೇಶ್ಚರ ತುಂಗರ ಸೇವೆ ಅನನ್ಯ -ಶ್ರೀಪತಿ ಹೇರ್ಳೆ
ಕೋಟ: ಆಗಿನ ಕಾಲದ ವೈದ್ಯರ ಸೇವೆ ನಿಜಕ್ಕೂ ಪ್ರಶಂಸನೀಯ ಅವರಿಗೆ ಹಗಲು ರಾತ್ರಿ ಎನ್ನದೆ ತನ್ನ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದರು. ಇದು ಪ್ರಸ್ತುತ ವೈದ್ಯರಿಗೆ ಮಾದರಿ ಎಂದು ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಬೆಳ್ಳಿ ಹಬ್ಬದ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಪರಿಸರ ಹಿರಿಯ ವೈದ್ಯ ಡಾ.ವಿಶ್ವೇಶ್ವರ ತುಂಗ ಇವರಿಗೆ ರಜತ ಗೌರವ ಸಲ್ಲಿಸಿ ಮಾತನಾಡಿ ತುಂಗರ ಸಮಾಜಮುಖಿ ವೈದ್ಯಕೀಯ ಸೇವೆ ಅನನ್ಯವಾದದ್ದು,ಆಗಿನ ಕಾಲದಲ್ಲಿ ಪ್ರಸೂತಿ ತಜ್ಞರಾಗಿ ಅದೆಷ್ಟೊ ಕುಟುಂಬಗಳಿಗೆ ಮರುಜೀವ ನೀಡಿದವರು.ವಾಹನದಲ್ಲಿ ಸಂಚರಿಸದೆ ಕಾಲ್ನಡಿಗೆ ಮೂಲಕ ಅನಾರೋಗ್ಯ ಪೀಡಿತರಿಗೆ ಅಶಕ್ತರಾದರೂ ಹಣ ಪಡೆಯದೆ ಆಶ್ರಯದಾತರಾಗಿದ್ದಾರೆ.
ತುಂಗರ ವೈದ್ಯಕೀಯ ಬದುಕಿನ ಸೇವೆ ವೈದ್ಯರಾದವರಿಗೆ, ವೈದ್ಯರಾಗುವರಿಗೆ ಮಾದರಿಯಾಗಿದ್ದಾರೆ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರ ತುಂಗರಿಗೆ ರಜತ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಇಂದು ಶ್ರೀ,ಸಾಲಿಗ್ರಾಮ ಪರಿಸರದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣ ಗ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣ ಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಡಾ.ತುಂಗರ ಪುತ್ರಿ ಉಷಾ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಸದಸ್ಯ ಕೇಶವ ಆಚಾರ್ ಸ್ವಾಗತಿಸಿ,ಗೌರವ ಸದಸ್ಯ ರಾಧಕೃಷ್ಣ ಬ್ರಹ್ಮಾವರ ಸನ್ಮಾನಪತ್ರ ವಾಚಿಸಿ,ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮವನ್ನು ನಿರೂಪಿಸಿದರು.ಸಾಂಸ್ಕ್ರತಿಕ ಕಾರ್ಯದರ್ಶಿ ಶಶಿಧರ ತಿಂಗಳಾಯ ವಂದಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಯಕ್ರಮದ ನಂತರ ರಜತ ಗೌರವದ ಸವಿನೆನಪಿಗೆ ಡಾ.ತುಂಗರ ಮೂಲಕ ಗಿಡನೆಡಲಾಯಿತು.
ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ತುಂಗರಿಗೆ ರಜತ ಗೌರವ ಸಲ್ಲಿಸಲಾಯಿತು. ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಇಂದು ಶ್ರೀ,ಸಾಲಿಗ್ರಾಮ ಪರಿಸರದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣ ಗ ಮತ್ತಿತರರು ಇದ್ದರು.