ಡೈಲಿ ವಾರ್ತೆ: 01 ಮೇ 2023
ಕುಂದಾಪುರ: ಅಪಾರ್ಟ್‌ಮೆಂಟ್‌ನಲ್ಲಿ ಯುವಕ ಸಾವು
ಕುಂದಾಪುರ: ಫೆರಿ ರಸ್ತೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ರೋಚನ ಕುಮಾರ್ (18) ಅವರು ಮನೆಯೊಳಗೆ ಅಸಹಜವಾಗಿ ಮೃತಪಟ್ಟಿದ್ದಾರೆ.
ಬ್ರಹ್ಮಾವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಮನೆಯ ಹಾಲ್‌ನಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಬಾಯಿಯಿಂದ ಕಂದು ಬಣ್ಣದ ದ್ರವ ಹೊರಗೆ ಬಂದಿತ್ತು. ಅವರು ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದು, ಯಾರೊಂದಿಗೂ ಮಾತನಾಡದೆ ಮೌನಿಯಾಗಿರುತ್ತಿದ್ದರು. ಈ ಬಗ್ಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಪ್ರಕರಣ ದಾಖಲಾಗಿದೆ.