ಡೈಲಿ ವಾರ್ತೆ:01 ಮೇ 2023

ಕೋಟ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನ‌ – ಇಬ್ಬರ ಬಂಧನ

ಕೋಟ:ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ‌ ಹಳೆಕೋಟೆ ಮೈದಾನದ ಬಳಿ ಭಾನುವಾರ ರಾತ್ರಿ ಆರೋಪಿಗಳಾದ ಗುಂಡ್ಮಿಯ ವಿಶ್ವನಾಥ ಮತ್ತು ಗಿರೀಶ್ ಎನ್ನುವವರು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ‌ ಮಾಡುತ್ತಿದ್ದು. ಈ ಸಂದರ್ಭ ಗಸ್ತುನಿರತರಾಗಿದ್ದ ಕೋಟ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.