ಡೈಲಿ ವಾರ್ತೆ:05 ಮೇ 2023

ಕಾರ್ಮಿಕ ವಿರೋಧಿ ಬಿ.ಜೆ.ಪಿಯನ್ನು ಸೋಲಿಸಿ ಕರ್ನಾಟಕ ಉಳಿಸಿ- ಕಾಮ್ರೇಡ್ ಶಂಕರ್

ಬಂಟ್ವಾಳ : ಸಿ.ಪಿ‌.ಐ.ಎಂ.ಎಲ್ ಪಕ್ಷದಿಂದ ಕೋಮುವಾದ ಸೋಲಿಸಿ ಕರ್ನಾಟಕ ಉಳಿಸಿ ಪ್ರಜಾಪ್ರಭುತ್ವ ಸಂವಿದಾನ ರಕ್ಷಿಸಲು ಅಭಿಯಾನ ಕೈಗೊಳ್ಳಲಾಗಿದೆ ಎಂದು ಎ.ಐ.ಸಿ‌.ಸಿ.ಟಿ.ಯು ರಾಷ್ಟ್ರೀಯ ಅಧ್ಯಕ್ಷ, ಸಿ.ಪಿ.ಐ.ಎಂ.ಎಲ್ (ಲಿಬರೇಷನ್ ) ಕೇಂದ್ರ ಸಮಿತಿ ಸದಸ್ಯ ಕಾಮ್ರೇಡ್ ಶಂಕರ್ ಹೇಳಿದರು.

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಿತಿ ವತಿಯಿಂದ ಬಿ.ಸಿ.ರೋಡಿ ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದು, ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ , ಇಂದೆಂದೂ ಇಲ್ಲ ದಂತಹ ಭ್ರಷ್ಟಾಚಾರ, ಬೆಲೆ ಏರಿಕೆ, ಶೈಕ್ಷಣಿಕ ,ವೈದ್ಯಕೀಯ ಮೂಲ ಸೌಕರ್ಯಗಳ ನಾಶ, ಯುವಜನರ ಬದುಕಿಗೆ ಮಾರಕವಾಗಿರುವ ನಿರುದ್ಯೋಗ, ಮಹಿಳೆಯರ ಮೇಲೆ , ಅಲ್ಪಸಂಖ್ಯಾತರ ಮೇಲಿನ ದಾಳಿ ಇವುಗಳಿಂದ ಜನತೆ ತತ್ತರಿಸಿದ್ದು‌ ಈ ಪರಿಸ್ಥಿತಿ ತಂದ ರಾಜ್ಯ ಬಿ.ಜೆ.ಪಿ ಸರಕಾರವನ್ನು ಸೋಲಿಸಿ ಸಂವಿಧಾನ ಪ್ರಜಾಪ್ರಭುತ್ವ ವನ್ನು ಉಳಿಸಬೇಕೆಂದು ಅವರು ಕರೆ ನೀಡಿದರು.

ಸಭೆಯಲ್ಲಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅದ್ಯಕ್ಷ ಎ.ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಕೆ.ಇ.ಮೋಹನ್, ಮುಖಂಡರಾದ ಸತೀಶ್ ಕುಮಾರ್ ಮಂಗಳೂರು, ನ್ಯಾಯವಾದಿ ತುಳಸೀದಾಸ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.