ಡೈಲಿ ವಾರ್ತೆ:09 ಮೇ 2023

ವರದಿ: ವಿದ್ಯಾಧರ ಮೊರಬಾ

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಹವಾ ನನ್ನ ಗೆಲುವನ್ನು ತಡೆಯಲು ಸಾಧ್ಯವಿಲ್ಲಾ : ಶಾಸಕಿ ರೂಪಾಲಿ ನಾಯ್ಕ

ಅಂಕೋಲಾ : ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಸೋಲಿಸಲು ಮಾಜಿ ಶಾಸಕ ಸತೀಶ ಸೈಲ್ ಹಾಗೂ ಮಾಜಿ ಸಚಿವ ಆನಂದ ಅಸ್ನೋಟಿಕರ ಒಂದಾಗಿದ್ದಾರೆ. ಆದರೆ ಇಂತವರಿಂದ ನನ್ನ ಗೆಲುವನ್ನು ತಡೆ ಯಲು ಸಾಧ್ಯವಿಲ್ಲ. ಹೀಗಾಗಿ ಈ ಬಾರಿಯೂ ನಾನು ಗೆಲ್ಲುವುದರ ಜತೆಗೆ ರಾಜ್ಯದಲ್ಲಿಯೇ ಬಿಜೆಪಿ ಆಡ ಳಿತಕ್ಕೆ ಬರಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.


ತಾಲೂಕಿನ ಬೆಳಂಬಾರದಲ್ಲಿ ಭಾನುವಾರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಚುನಾ ವಣೆಯನ್ನು ವೈಯಕ್ತಿಕಕ್ಕೆ ಬಳಸಬಾರದು. ಆದರೆ ಒಂದು ಹೆಣ್ಣನ್ನು ಸೋಲಿಸಲು ಈ ಇಬ್ಬರು ಮಹಾನು ಭಾವರು ಶ್ರಮಿಸುತ್ತಿರುವುದನ್ನು ನೋಡಿದರೆ ನಿಜಕ್ಕೂ ನಾಚಿಕೆಯಾಗುತ್ತಿದೆ. ಜನರ ಬಳಿ ಮತಯಾಚಿಸಿ ಗೆಲ್ಲುವುದರ ಬದಲು ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿರುವದನ್ನು ನೋಡಿದರೆ ಇವರು ಎಷ್ಟು ಹತಾಶೆ ಗೆ ಒಳಗಾಗಿದ್ದಾರೆ ಎನ್ನುವುದು ತಿಳಿದುಬರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಆನಂದ ಅಸ್ನೋಟಿಕರ ರಾಷ್ಟ್ರೀಯ ಪಕ್ಷವನ್ನು ಸೇರುವುದಾಗಿ ಹೇಳಿ ನಂತರ ಎಲ್ಲಿಯೂ ಅವಕಾಶ ಸಿಗದಿದ್ದಾಗ ಸತೀಶ ಸೈಲ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅವರಿಗೆ ಸೂಚಿಸುತ್ತಿರುವುದು ನಿಜಕ್ಕೂ ಮೂರ್ಖತನದ ಪರಮಾವಧಿ. ಇನ್ನು ಮುಂದೆ ಈ ಕ್ಷೇತ್ರದಲ್ಲಿ ಗೆಲ್ಲುವುದು ಅವರಿಗೆ ಅಷ್ಟು ಸುಲಭವಲ್ಲ. ಯಾವುದೇ ಕಾರಣಕ್ಕೂ ರೂಪಾಲಿಯ ಜಯ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡ ಚೊಳಿಯಾ ಖಾರ್ವಿ, ಗಂಗಾಧರ ಖಾರ್ವಿ, ತುಕರಾಮ ಖಾರ್ವಿ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.



ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಭಾಸ್ಕರ ನಾರ್ವೇಕರ, ನಾಗರಾಜ ನಾಯಕ, ಪ್ರಮುಖರಾದ ಪರ್ಬತ್ ನಾಯ್ಕ, ರೇಖಾ ಪರ್ಬತ್, ತಾಲೂಕು ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ರಾಜೇಂದ್ರ ವಿ. ನಾಯ್ಕ, ಮಾದೇವ ಗೌಡ, ಬೋಜರಾಜ್ ಕುಡ್ತಳಕರ, ರಾಮದಾಸ ಖಾರ್ವಿ, ಪ್ರಕಾಶ ಖಾರ್ವಿ, ವಿಕಾಶ ಖಾರ್ವಿ, ರಮೇಶ ಖಾರ್ವಿ, ಕಾಶಿನಾಥ ಖಾರ್ವಿ, ನಾಗರಾಜ ಖಾರ್ವಿ, ರಾಮಚಂದ್ರ ಗೌಡ, ವಿಜಯ ವಾಮನ ಖಾರ್ವಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.