ಡೈಲಿ ವಾರ್ತೆ: 13 ಮೇ 2023
ಕಾಪು ಕ್ಷೇತ್ರದಲ್ಲಿ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ ಗುರ್ಮೆ ಸುರೇಶ ಶೆಟ್ಟಿ
ಕಾಪು: ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೊದಲ ಬಾರಿ ಗುರ್ಮೆ ಸುರೇಶ್ ಶೆಟ್ಟಿ ಅವರು 79,793 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಮತ ಎಣಿಕೆಯ ಅಂತ್ಯದ ವೇಳೆಗೆ ಈ ಬಾರಿಯ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು 12,709 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರನ್ನು ಸೋಲಿಸಿ ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು 67,084 ಮತಗಳು, ಎಸ್.ಡಿ.ಪಿ.ಐ ಅಭ್ಯರ್ಥಿ ಮೊಹಮ್ಮದ್ ಹನೀಫ್ ಅವರಿಗೆ 1612, ಜೆಡಿಎಸ್ ಸಬಿನಾ ಸಮದ್ 565, ಆಪ್(ಎಎಪಿ) ಅಭ್ಯರ್ಥಿ ಎಸ್.ಆರ್ ಲೋಬೋ ಅವರು 248 ಮತಗಳನ್ನು ಪಡೆದುಕೊಂಡಿದ್ದರು. ಹಾಗೂ ಈ ಬಾರಿ ಕಾಪು ಕ್ಷೇತ್ರದಲ್ಲಿ 798 ನೋಟಾ ಮತದಾನವಾಗಿದೆ.
ಈ ಬಾರಿ ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಟಫ್ ಫೈಟ್ ಇದ್ದಿತು. ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಸಾಮಾಜಿಕ ಕಾರ್ಯ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಕೂಡ ಸಿಂಪತಿ ಹಾಗೂ ಕಳೆದ ಬಾರಿ ಅವರು ಚುನಾವಣೆಯಲ್ಲಿ ಸೋತಿದ್ದರೂ ಜನರೊಂದಿಗೆ ಬೆರೆತಿದ್ದೂದು ಅವರ ಪಾಲಿಗೆ ಗೆಲುವಿಗೆ ಸಹಕಾರಿಯಾಗಬಹುದು ಎಂದು ಕೊಂಡಿದ್ದರು. ಆದ್ದರಿಂದ ಎರಡೂ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿಯಿತ್ತು. ಈ ಎರಡೂ ಪಕ್ಷಗಳ ನೇರ ಹಣಹಣಿಯಲ್ಲಿ ಈ ಬಾರಿ ಮತದಾರರು ಬಿಜೆಪಿ ಅಭ್ಯರ್ಥಿಯ ಕೈ ಹಿಡಿದಿದ್ದಾರೆ.