ಡೈಲಿ ವಾರ್ತೆ:20 ಮೇ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ:ಭಾರಿ ಗಾತ್ರದ ವಾಹನ ಸಂಚಾರದಿಂದ ಹಟ್ಟಿಕೇರಿ ಪಾಂಡುಪುರ ಸೇತುವೆ ಬಿರುಕು !

ಅಂಕೋಲಾ : ತಾಲೂಕಿನ ರಾ.ಹೆ.66ರ ಹಟ್ಟಿಕೇರಿ ಪಾಂಡುಪುರ ಸೇತುವೆಯ ಮೇಲೆ ಭಾರಿ ಗಾತ್ರದ ವಾಹನ ಸಂಚಾರದಿಂದ ಸೇತುವೆ ಬಿರುಕು ಬಿಟ್ಟು ಕುಸಿಯುವ ಮಟ್ಟಕ್ಕೆ ತಲುಪಿದ ಘಟನೆ ಶನಿವಾರ ಸಂಜೆ ನಡೆದಿದೆ.



ಮಹಾರಾಷ್ಟ್ರ ಕೋಲಾಪುರದಿಂದ ನಾರ್ಥ ಗೋವಾಕ್ಕೆ ವಿದ್ಯುತ್ ಪರಿವರ್ತಕವನ್ನು ಸಾಗಿಸುತ್ತಿದ್ದ ಹೈಡ್ರಾಲಿಕ್ ಎಕ್ಸೆಲ್ ವಾಹನ ಸುಮಾರು 138 ಚಕ್ರ ಹಾಗೂ 417 ಕೆ.ಜಿ. ಬಾರದ ವಿದ್ಯುತ ಪರಿವರ್ತಕ ಸೇರಿ ದಂತೆ ಒಟ್ಟು 228 ಮೆಟ್ರಿಕ್‍ಟನ್ ಭಾರ ಹೊಂದಿದ್ದ ಹಟ್ಟಿಕೇರಿ ಟೋಲ್‍ಗೇಟ್‍ನಿಂದ 3 ವಾಹನವು ಹೊರಟಿತ್ತು. ಮೊದಲನೇ ವಾಹನವು ಸೇತುವ ದಾಟುತ್ತಿದ್ದಂತೆ ಸೇತುವೆ ಬಿರುಕು ಕಾಣ ಸಿಕೊಂಡಿತ್ತು. ಇದನ್ನು ನೋಡಿದ ಇನ್ನೆರಡು ವಾಹನದ ಚಾಲಕರು ವಾಹನವನ್ನು ಮುಂದೆ ಚಲಾಯಿಸದೇ ಅಲ್ಲಿಯೇ ನಿಲ್ಲಿಸಿ ದೊಡ್ಡ ಪ್ರಮಾಣದಲ್ಲಾಗುವ ಹಾನಿಯನ್ನು ತಪ್ಪಿಸಿದ್ದಾರೆ. ಪಿಎಸ್‍ಐ ಕುಮಾರ ಸಿ.ಕೆ., ಪ್ರೇಮನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ, ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಬರುವ ವಾಹನಕ್ಕೆ ಸೇತುವೆಯ ಇನ್ನೊಂದು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.