ಡೈಲಿ ವಾರ್ತೆ: 26 ಮೇ 2023

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ ತಾಲೂಕಿನ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ತುರ್ತು ಸಭೆ.!

ಮಳೆ ಬರುವವರೆಗೆ ನೇತ್ರಾವತಿ ನದಿಯ ನೀರು ಸಹಿತ ಇತರ ಮೂಲಗಳನ್ನು ಉಪಯೋಗಿಸಿ ಕೊಂಡು ಜನರಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಎ.ಎಮ್.ಆರ್. ಡ್ಯಾಂನಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಶೇಖರಣೆಯಾಗಿದ್ದರೆ ಅಲ್ಲಿಂದ ಗೇಟ್ ತೆರವು ಮಾಡಿ ಹೆಚ್ಚಿನ ನೀರನ್ನು ಕೆಳ ಭಾಗಕ್ಕೆ ಹರಿಯಲು ಬಿಟ್ಟರೆ, ಗ್ರಾಮಾಂತರ ಪ್ರದೇಶ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ನೀರಿನ ಬರ ನೀಗಿಸಲು ಸಾಧ್ಯವಾಗಬಹುದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಜೊತೆಗೆ ಮಾತನಾಡಿ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಮಳೆಗಾಲ ಆರಂಭವಾಗುವರೆಗೆ ತಾಲೂಕಿನ ಜನತೆಗೆ ಮೂಲಭೂತ ಸೌಕರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಪ್ರಮುಖವಾಗಿ ತಾಲೂಕಿನ ಪ್ರತಿಯೊಬ್ಬರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಡಬೇಕಾಗದ ಕರ್ತವ್ಯಗಳನ್ನು ಗ್ರಾಮಮಟ್ಟದ ಅಧಿಕಾರಿಗಳಿಗೆ ತಿಳಿಸುವಂತದ್ದು, ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಕರೆದು ಸಭೆ ಕರೆಯಬೇಕಾಗಿದೆ ಎಂದು ತಿಳಿಸಿದರು.

ಮಳೆಗಾಲ ಆರಂಭವಾದ ಬಳಿಕ ನೆರೆ ಸಹಿತ ಇತರ ಪಾಕೃತಿಕ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಇಂಜಿನಿಯರ್ ಗಳಾದ ಕೃಷ್ಣ, ಜಗದೀಶ್ , ಕುಶ ಕುಮಾರ್ ಮತ್ತು ನಾಗೇಶ್ ಉಪಸ್ಥಿತರಿದ್ದರು.

ಮೇ.29 ರಂದು ತಾಲೂಕು ಅಧಿಕಾರಿಗಳ ಸಭೆ
ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಾಗೂ ಪಕೃತಿ ವಿಕೋಪದ ಮುಂಜಾಗೃತ ಕ್ರಮವಹಿಸುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಮೇ. 29 ರಂದು ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಸಲಾಗುತ್ತದೆ ಎಂದು ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ ಅವರು ತಿಳಿಸಿದ್ದಾರೆ.