ಡೈಲಿ ವಾರ್ತೆ:29 ಮೇ 2023
ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ- ರಾಮಲಿಂಗಾ ರೆಡ್ಡಿಗೆ ಸಾರಿಗೆ ಜೊತೆ ಮುಜರಾಯಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಸಿಎಂ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ ತಕ್ಷಣವೇ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.
ಸಾರಿಗೆ ಖಾತೆ ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಗೆ ಸಾರಿಗೆ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಲಾಗಿದೆ. ಸಮಾಜ ಕಲ್ಯಾಣ ಅಥವಾ ಕಂದಾಯ ಖಾತೆ ಬಗ್ಗೆ ಒಲವು ಹೊಂದಿದ್ದರೆನ್ನಲಾದ ಕೆ.ಹೆಚ್ ಮುನಿಯಪ್ಪಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಜೊತೆಗೆ ಗ್ರಾಹಕ ವ್ಯವಹಾರಗಳ ಖಾತೆ ಜವಾಬ್ದಾರಿ ನೀಡಲಾಗಿದೆ.
ಡಿಸಿಎಂ ಡಿಕೆಶಿಗೆ ಬೆಂಗಳೂರು ನಗರ ಅಭಿವೃದ್ಧಿ, ಜಲಸಂಪನ್ಮೂಲ, ಆರ್.ಬಿ.ತಿಮ್ಮಾಪುರ ಬಳಿ ಇದ್ದ ಮುಜರಾಯಿ ಖಾತೆ ರಾಮಲಿಂಗಾ ರೆಡ್ಡಿಗೆ ಹೆಚ್ಚುವರಿ ಖಾತೆಯಾಗಿ ನೀಡಲಾಗಿದೆ. ಎಂಬಿ ಪಾಟೀಲ್‍ಗೆ ಹೆಚ್ಚುವರಿ ಆಗಿ ನೀಡಲಾಗಿದ್ದ ಐಟಿಬಿಟಿ ಸಿಎಂ ಬಳಿಯೇ ಉಳಿಸಿಕೊಂಡಿದ್ದಾರೆ. ಎಂ.ಸಿ.ಸುಧಾಕರ್‍ಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ಮೊದಲು ವೈದ್ಯಕೀಯ ಶಿಕ್ಷಣ ನೀಡಲಾಗಿತ್ತು. ಶರಣ ಪ್ರಕಾಶ್ ಪಾಟೀಲ್‍ಗೆ ವೈದ್ಯಕೀಯ ಶಿಕ್ಷಣ ನೀಡಲಾಗಿದೆ. ಮೊದಲು ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು ಎರಡು ಖಾತೆಯನ್ನ ಇಬ್ಬರಿಗೆ ಅದಲು ಬದಲು ಮಾಡಲಾಗಿದೆ.
ಯಾರಿಗೆ ಯಾವ ಖಾತೆ..?: