ಡೈಲಿ ವಾರ್ತೆ:05 ಜೂನ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಬತ್ತಿದ ಶರಾವತಿ – ಲಾಂಚ್ ಸೇವೆ ಸ್ಥಗಿತ ಸಾಧ್ಯತೆ – ಆತಂಕದಲ್ಲಿ ಹಿನ್ನೀರ ಜನತೆ!

ಸಿಗಂದೂರು :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರ ನಾಡಿಗೆ ಪ್ರಸಿದ್ಧವಾಗಿದ್ದು, ಕಳೆದ ಹಲವು ವರ್ಷಗಳಿಗಿಂತ ಈ ವರ್ಷ ಬಹಳ ನೀರು ಕಡಿಮೆಯಾಗಿದ್ದು ಇನ್ನೂ ಮಳೆ ಬಾರದಿದ್ದರೆ ಲಾಂಚ್ ಸಂಪರ್ಕ ಅಸಾಧ್ಯ ವಾಗಿದೆ.ಜೂನ್ ಮೊದಲ ವಾರ ಮುಗಿಯುತ್ತಾ ಬಂದರೂ ಮಳೆಯ ಲಕ್ಷಣಗಳು ಕಾಣುತ್ತಿಲ್ಲ.ಶರಾವತಿ ಒಡಲು ಬತ್ತಿ ಬಹುತೇಕ ಬರಿದಾಗಿದ್ದು ಹೀಗೆ ಮುಂದು ವರೆದರೆ ಲಾಂಚ್ ಸಂಪರ್ಕ ಸ್ಥಗಿತವಾಗುವ ಲಕ್ಷಣ ಕಂಡುಬರುತ್ತಿದೆ.


ಲಾಂಚ್ ನಿಲ್ಲಿಸುವ ಎರಡೂ ದಡಗಳ ಪ್ಲಾಟ್ ಫಾರಂ ಗಳು ಮುಕ್ತಾಯವಾಗಿದ್ದು ವಾಹನ ಏರಿಸಲು,ಇಳಿಸಲು ಸಾಹಸ ಪಡುವಂತಾಗಿದೆ.ಲಕ್ಷಗಟ್ಟಲೆ ಬೆಲೆಬಾಳುವ ಬಸ್ಸು,ಕಾರುಗಳು ಇಲ್ಲಿ ಮುರಿದು ಹೋಗುತ್ತಿದ್ದು ಜನ ಪರದಾಡುವಂತಾಗಿದೆ.ಹೀಗೆ ಲಾಂಚ್ ಏನಾದರೂ ನಿಂತು ಕಲೆಕ್ಷನ್ ಮಾಡಿ ಜನರನ್ನು ಮಾತ್ರ ದಾಟಿಸುವಂತಾದರೆ ಇಲ್ಲಿನ ಅನಾರೋಗ್ಯ ಪೀಡಿತರಿಗೆ,ಹೆರಿಗೆಯ ದಿನ ಹತ್ತಿರವಾಗುತ್ತಿರು ಗರ್ಭಿಣಿಯರಿಗೆ ,ಹಾವು ಕಡಿದವರಿಗೆ, ಕಡುಕಷ್ಟವಾಗುವ ಸಾಧ್ಯತೆ ಎದುರಾಗಿದೆ.


ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಪ್ರಯತ್ನದಿಂದ ನಿರ್ಮಾಣವಾಗುತ್ತಿರುವ ಸೇತುವೆಯ ಕೆಲಸ ಬರದಿಂದ ಸಾಗುತ್ತಿದ್ದು ಬಹುಬೇಗ ಈ ಕಾಮಗಾರಿ ಮುಗಿದು ಜನರ ಸಂಕಷ್ಟ ನೀಗುವಂತಾಗಲಿ ಎಂಬುದು ಬಹುಜನರ ನಿರೀಕ್ಷೆಯಾಗಿದೆ.