ಡೈಲಿ ವಾರ್ತೆ:10 ಜೂನ್ 2023
ಕುಂದಾಪುರ ಖಾರ್ವಿ ಮೇಲ್ಕೇರಿ ಸರಕಾರಿ ಬಾವಿಕಟ್ಟೆಯ ಚರಂಡಿ ಸಮೀಪ ಅಕ್ರಮ ಕಟ್ಟಡ ತೆರವಿಗೆ ಮಾನ್ಯ ಜಿಲ್ಲಾಧಿಕಾರಿಯ ಅನುಮತಿ ಮೇರೆಗೆ ಸರ್ವೆ
ಕುಂದಾಪುರ: ಕುಂದಾಪುರ ಪುರಸಭೆಯ 2ನೇ ವಾರ್ಡ್ ವ್ಯಾಪ್ತಿಯ ಖಾರ್ವಿ ಮೇಲ್ಕೆರಿ ಸರಕಾರಿ ಬಾವಿಕಟ್ಟೆ ಸ್ಥಳದಲ್ಲಿ ಚರಂಡಿ ಹಾಗೂ ರಸ್ತೆಯ ಸಮೀಪವಾಗಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಜೂ. 9 ರಂದು ಮಾನ್ಯ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ದಂಡಾಧಿಕಾರಿ ಹಾಗೂ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಅನುಮತಿ ಮೇರೆಗೆ ಅಕ್ರಮ ಕಟ್ಟಡ ತೆರವು ಮಾಡಲು ಸರ್ವೆ ನಡೆಯಿತು.
ಈ ಸಂದರ್ಭದಲ್ಲಿ ಕುಂದಾಪುರ ಭೂಮಾಪಕ ಅಧಿಕಾರಿ ವಿಜಯ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಆನಂದ್ ಹಾಗೂ ಭೂಮಾಪಕ ಸಿಬ್ಬಂದಿ ರಾಘವೇಂದ್ರ, ದೂರುದಾರ ಸತೀಶ್ ಖಾರ್ವಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.