ಡೈಲಿ ವಾರ್ತೆ:20 ಜೂನ್ 2023

– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ. (ಪತ್ರಕರ್ತರು& ಮಾಧ್ಯಮ ವಿಶ್ಲೇಷಕರು)
feedback:[email protected]

ಕಾಂತಾರ” ಯಶಸ್ವಿ ನಂತರ “ಕೊರಗಜ್ಜ”ನ ಮಹಿಮೆಯನ್ನು ಸಾರುವ ಚಲನಚಿತ್ರಕ್ಕೆ ಕ್ಷಣಗಣನೆ ಕೊರಗಜ್ಜನ ಸ್ಥಳ ಸಾನಿಧ್ಯ, ಕರಾವಳಿಯ ಪರಂಪರಾಗತ ವೈಶಿಷ್ಟ್ಯತೆಯನ್ನ ಜಗತ್ತಿಗೆ ಪಸರಿಸುವ ಸಿನಿಮಾ ಪರದೆ ಮೇಲೆ ಬರಲು ಸಜ್ಜು….!” ಇದು ಪವಾಡ ಪುರುಷನ ರೋಚಕ ಕಥೆ..!”

ಸುದ್ದಿ:ಮಂಗಳೂರು “ಕಾಂತಾರ” ಸಿನಿಮಾದ ನಂತರ “ಕೊರಗಜ್ಜ” ಎನ್ನುವ ಹೊಸ ಸಿನಿಮಾ ತೆರೆಯ ಮೇಲೆ ಬರಲು ಅಣಿಯಾಗುತ್ತಿದೆ. ಕಾಂತಾರ ಯಶಸ್ವಿ ಪ್ರದರ್ಶನದ ನಂತರ ಕರಾವಳಿಯ ಧಾರ್ಮಿಕತೆಯನ್ನು ಸಾರುವ ಇನ್ನೊಂದು ಚಿತ್ರ “ಕೊರಗಜ್ಜ” ಇನ್ನೇನು ಕೆಲವೇ ದಿನಗಳ ಬಳಿಕ ತೆರೆಯ ಮೇಲೆ ಅಪ್ಪಳಿಸಲಿದೆ.

ಕರಾವಳಿಯ ದಂತ ಕಥೆ ಹಾಗೂ ಕರಾವಳಿಯಲ್ಲಿನ ದೈವ ಕಲೆಯನ್ನು ಸಾರುವ ಕೊರಗಜ್ಜ ಚಲನಚಿತ್ರವು ಬದುಕಿನ ಹಾಗೂ ದೈವ ನೆಲೆಯನ್ನು ಸೃಷ್ಟಿಸುವಂತಹ ವಿಶೇಷ ಭಾರಿ ಪಾರಂಪರಿಕ ಸಂಸ್ಕೃತಿಯನ್ನು ಮತ್ತೆ ಜನರಿಗೆ ಋಣಭಡಿಸಲು ಸಿದ್ಧವಾಗುತ್ತಿದೆ. ಅದರೊಂದಿಗೆ ಗಗನಚುಕ್ಕಿ ಜಲಪಾತದಲ್ಲಿ ಕ್ಲೈಮಾಕ್ಸ್ ಚಿತ್ರವನ್ನು ಗುಣಪಡಿಸಲಾಗಿದೆ. ಕರಾವಳಿ ಭಾಗದಲ್ಲಿ ವಿಶೇಷ ದೈವ ಕಲೆಯನ್ನು ಸಾರುವ ಕೊರಗಜ್ಜ ಚಲನಚಿತ್ರ ಇನ್ನೇನು ಕೆಲವೇ ತಿಂಗಳಗಳು ಒಳಗೆ ತೆರೆ ಮೇಲೆ ಬರಲಿದೆ ದಾರ್ಶನಿಕ ಕ್ಷೇತ್ರವಾದ ಕರಾವಳಿಯ ದಂತಕತೆಯನ್ನು ಮೂಲವಾಗಿ ರಚಿಸಿದ ಚಿತ್ರತಂಡ ಕೊರಗಜ್ಜನ ಮೂಲ ಪವಿತ್ರವಾದಂತಹ ಸ್ಥಳ ಸ್ಥಾನದ್ಯ ಹಾಗೂ ಕೊರಗಜ್ಜನ ಮಹಿಮೆಯನ್ನು ಸಾದರ ಪಡಿಸುವಂತಹ ಚಿತ್ರಸಿದ್ಧತೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

‘ಕೊರಗಜ್ಜ’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಗಗನ‌ ಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕುವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ತುಳುನಾಡಿನ ದೈವಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಿಗೆ ಇದೆ. ‘ಕಾಂತಾರ’ ಸಿನಿಮಾದಲ್ಲಿ ಭೂತಕೋಲದ ಬಗ್ಗೆ ತೋರಿಸಿದ ಬಳಿಕ ಈ ಆಸಕ್ತಿ ಹೆಚ್ಚಾಯಿತು. ಕೊರಗಜ್ಜ ದೇವರ ಕುರಿತು ಈಗ ಸಿನಿಮಾ ಬರುತ್ತಿರುವುದು ಗೊತ್ತೇ ಇದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಕೇಳಿಬಂದಿದೆ. ಮೂರು ಬಾರಿ ಈ ಸಿನಿಮಾಗೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗಿದೆ ಎಂಬುದು ವಿಶೇಷ. ಈ ರೀತಿ ಮರು ಚಿತ್ರೀಕರಣ ಮಾಡಿದ್ದಕ್ಕೂ ಕಾರಣ ಇದೆ. ಹಲವು ಪ್ರತಿಭಾವಂತ ಕಲಾವಿದರು ‘ಕೊರಗಜ್ಜ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರು ‘ಧೃತಿ ಕ್ರಿಯೇಷನ್ಸ್’ ಮತ್ತು ‘ಸಕ್ಸಸ್ ಫಿಲಂಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡ, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಸುಧೀರ್ ಅತ್ತಾವರ್ ಅವರು ‘ಕೊರಗಜ್ಜ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅದಾಗಲೇ ಚಿತ್ರೀಕರಣ ಮುಕ್ತಾಯ ಆಗಿತ್ತು. ಎಡಿಟಿಂಗ್ ನಡೆಸುತ್ತಿದ್ದ ಸುಧೀರ್ ಅತ್ತಾವರ್ ಅವರು ಮೂರನೇ ಬಾರಿಗೆ ಕ್ಲೈಮ್ಯಾಕ್ಸ್ ದೃಶ್ಯವನ್ನು ಮರು ಚಿತ್ರೀಕರಿಸಿದ್ದಾರೆ. ವಿಶೇಷ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ‘ಆಂಟ್ ಮ್ಯಾನ್’, ‘ಟ್ರೂ ಸ್ಪಿರಿಟ್’, ‘ಅಕ್ವ‌ ಮ್ಯಾನ್’ ಮೊದಲಾದ ಹಾಲಿವುಡ್ ಚಿತ್ರಗಳ ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ತಂತ್ರಜ್ಞರು ಭಾಗಿ ಆಗಿದ್ದರು ಎಂದು ‘ಕೊರಗಜ್ಜ’ ಚಿತ್ರತಂಡದವರು ಪತ್ರಿಕೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಲಹಂಕದ ಬಳಿ ಇರುವ ಸತತ 5 ದಿನಗಳ ಕಾಲ ಹಿರಿಯ ನಟಿ ಶ್ರುತಿ, ನಾಯಕ ನಟ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡ್ಸಿ ಮುಂತಾದ ಕಲಾವಿದರು ಗ್ರೀನ್ ಮ್ಯಾಟ್ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಕೊರಗಜ್ಜ’ ಚಿತ್ರದ ಸಂಕಲನ ಕಾರ್ಯವನ್ನು ಸುರೇಶ್ ಅರಸ್ ಮತ್ತು ವಿದ್ಯಾಧರ್ ಶೆಟ್ಟಿ ಮಾಡುತ್ತಿದ್ದಾರೆ. ಸುಧೀರ್-ಕೃಷ್ಣ‌ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪವನ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಖ್ಯಾತ ನಟ ಕಬೀರ್ ಬೇಡಿ, ಹಿರಿಯ ಕಲಾವಿದೆ ಭವ್ಯಾ, ಸಂದೀಪ್ ಸೊಪರ್ಕರ್, ನವೀನ್ ಪಡಿಲ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶ್ರುತಿ ಅವರು ನಿರ್ವಹಿಸುತ್ತಿರುವ ಕೊರಗಜ್ಜನ ಸಾಕು ತಾಯಿ ಬೈರಕ್ಕೆ ಬೈಕಡ್ತಿಯ ದೇವಸ್ಥಾನವು ಉಡುಪಿ ಬಳಿ ಇದೆ. ಕೊರಗಜ್ಜ ಮತ್ತು ಸಾಕುತಾಯಿ ಬೈಕಡ್ತಿಯ ಸಂಬಂಧದ ಕುತೂಹಲಕಾರಿ ಅಂಶ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ.


ಕರಾವಳಿಯ ದಂತಕತೆಯನ್ನು ಸಾರುವ ಕೊರಗಜ್ಜ ಸಿನಿಮಾ ಸದ್ಯದಲ್ಲೇ ಕ್ಲೈಮ್ಯಾಕ್ಸ್ ಮುಗಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲು ಅಣೆಯಾಗುತ್ತಿದೆ. ಕರಾವಳಿ ಭಾಗದ ದೈವ ದೇವಸ್ಥಾನ ಹಾಗೂ ದೇವರಗಳ ನಡುವಿನ ಸಂಬಂಧ ಹಾಗೂ ದೇವರ ಭಕ್ತಿಗೆ ಜನಸಮುದಾಯ ಯಾವ ರೀತಿ ತನ್ನ ಭಕ್ತಿಯನ್ನು ತೋರ್ಪಡಿಸುತ್ತದೆ ಎನ್ನುವುದು ಸಿನಿಮಾದಲ್ಲಿ ಚಿತ್ರಿಸಲಾಗಿದೆ.
ಅದಲ್ಲದೆ ಕೊರಗಜ್ಜನ ಮಹಿಮೆ ಜಗತ್ತಿಗೆ ಪಸರಿಸುವಂತ ಕೆಲಸ ಮಾಡುತ್ತಿರುವುದು ಚಿತ್ರತಂಡದ ಹೆಮ್ಮೆಯಾಗಿದೆ. ಮತ್ತೊಂದು ವಿಶೇಷವೇನೆಂದರೆ ಕೊರಗಜ್ಜ ಸ್ವಾಮಿಯ ವೈಶಿಷ್ಟತೆ ಮತ್ತು ಪವಾಡ ಪುರುಷನ ದಂತಕತೆಯನ್ನು ಸಾರುವ ಈ ಚಿತ್ರ ಮಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜುಗೊಳಿತಿದೆ. ಹಲವು ಬಾರಿ ಕೊರಗಜ್ಜನ ಮಹಿಮೆ ಹಾಗೂ ಪವಾಡವನ್ನು ಹಾರಿದಿರುವ ಜನ ಜಗದಗಲ ಭಕ್ತಾದಿಗಳು ಮಂಗಳೂರು ಮಾತ್ರವಲ್ಲದೆ, ಬಹು ರಾಜ್ಯದಲ್ಲಿ ಕೂಡ ನೆಲೆಯಾಗಿದ್ದಾರೆ ಅಂತಹ ಪವಾಡ ಪುರುಷನ ಚಿತ್ರ ದೃಶ್ಯದಲ್ಲಿ ನೋಡಿದರೆ ನಮಗೆ ಮೈ ಜುಮ್ ಮೆನಿಸಬಹುದು. ಅಂತಹ
ಚಲನಚಿತ್ರ ಜಗತ್ತಿಗೆ ಕೊಡಲು ಚಿತ್ರತಂಡ ಸಜ್ಜಾಗಿದೆ. ಒಟ್ಟಾರೆ ಏನೇ ಇರಲಿ, ಭಗವಂತನ ಮಹಿಮೆಯನ್ನು ಸಾರುವ ಈ ಚಿತ್ರ ಶತದಿನೋತ್ಸವ ಆಚರಿಸಲಿ ಎನ್ನುವುದೇ ಪತ್ರಿಕೆಯ ಸದಾಕಾಲದ ಆಶಯ.


ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ.