ಡೈಲಿ ವಾರ್ತೆ:20 ಜೂನ್ 2023

ಅಂಗವಿಕಲರಿಗೆ ಉಚಿತ ಮತ್ತು ಅನಿಯಮಿತ ಪ್ರಯಾಣಕ್ಕೆ ಅನುಮತಿ ಕೋರಿ:ಭಾರತೀಯ ಅಂಗವಿಕಲರ ಸಬಲೀಕರಣ ಸಂಘದಿಂದ ಸಾರಿಗೆ ಸಚಿವರಿಗೆ ಮನವಿ

ಬೆಂಗಳೂರು: ಭಾರತೀಯ ಅಂಗವಿಕಲರ ಸಭಲೀಕರಣ ಸಂಸ್ಥೆ ಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅವರು ಕರ್ನಾಟಕ ಸರಕಾರದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಅವರ ಕಚೇರಿಯಲ್ಲಿ ಇವತ್ತು ಭೇಟಿ ಮಾಡಿ ಸಮಸ್ತ ಅಂಗವಿಕಲರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉಚಿತ ಮತ್ತು ಅನಿಯಮಿತ ಪ್ರಯಾಣಕ್ಕೆ ಅನುಮತಿ ಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ಹಿಂದೆ ಅಂಗವಿಕಲರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣದ ಅವಕಾಶ ಒದಗಿಸಲಾಗಗಿತ್ತಾದರೂ ಕಾರಣಾಂತರದಿಂದ ಅದನ್ನು ಹಿಂಪಡೆದು 100 ಕಿ.ಮೀ. ಪರಿಮಿತಿಯೊಳಗೆ ವರ್ಷಕ್ಕೆ ರೂ.660 /- ಪಾವತಿಸುವಂತೆ ಮಾರ್ಪಡಿಸಿದ್ದು ಇದರಿಂದ ಅಂಗವಿಕಲರಿಗೆ ಸ್ವಚಂದ ಪ್ರಯಾಣಕ್ಕೆ ಅನಾನುಕೂಲವಾಗಿರುವದನ್ನು ಕೊಡಕ್ಕಲ್ ಅವರು ಸಚಿವರ ಗಮನಕ್ಕೆ ತಂದಾಗ ಅವರು ಮನವಿಯನ್ನು ಸ್ವೀಕರಿಸಿ ಪರಿಶೀಲಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ .ಮಾಜಿ ಸದಸ್ಯ ಮೋಹನ, ಬೆಂಗಳೂರು ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಮಧುರಾಣಿ ಗೌಡ ಅವರು ಉಪಸ್ಥಿತರಿದ್ದರು.