ಡೈಲಿ ವಾರ್ತೆ:30 ಜೂನ್ 2023

– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ವೇಗಕ್ಕೆ ಬ್ರೇಕ್: ಹೆದ್ದಾರಿ ಅಪಘಾತಕ್ಕೆ ಇದುವರೆಗೆ ಸರಾಸರಿ ನೂರು ಜನರ ಜೀವ ಬಲಿ, “ವೇಗದ ಮಿತಿ ನೂರಕ್ಕೆ ತಡೆ”

ಸುದ್ದಿ: ಬೆಂಗಳೂರು/ ಮೈಸೂರು:ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದುವರೆಗೆ ನೂರು ಜನರ ಜೀವ ಅಪಘಾತಕ್ಕೆ ಬಲಿಯಾಗಿದೆ. ಅದೇ ರೀತಿ ತಡೆರಹಿತ ಹೆದ್ದಾರಿ ಆದ್ದರಿಂದ ಜನರ ಮಿತಿಗೆ ಕೊನೆದೆ ಕೊನೆ ಇರಲಿಲ್ಲ. ಆ ಕಾರಣಕ್ಕಾಗಿ ಇದನ್ನ ಮನಗಂಡು ಪೊಲೀಸ್ ಇಲಾಖೆ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ತೀರ್ಮಾನ ಮಾಡಿ ರಾಡಾರ್ ಗನ್ ಹಾಗೂ ವಾಹನ ನಂಬರ್ ಪ್ಲೇಟ್ ರೆಕಗ್ನಿಷನ್ಅಳವಡಿಸಲು ನಿರ್ಧರಿಸಲಾಗಿದೆ.


ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ದಿನನಿಂದು ದಿನಕ್ಕೆ ಹೆಚ್ಚುತ್ತಿದ್ದು ಎಕ್ಸ್ಪ್ರೆಸ್ ಹೈವೇ ಎಂಬ ಕಾರಣಕ್ಕೆ ವೇಗ ಮಿತಿಮೀರಿ ಹೋಗುತ್ತಿದ್ದು ಐಷಾರಾಮಿ ವಾಹನಗಳು 140 ರಿಂದ 150 ಕಿಲೋ ಮೀಟರ್ ಸ್ಪೀಡ್ ದಲ್ಲಿ ಸಂಚರಿಸುತ್ತಿದ್ದು ಇದರಿಂದ ವಾಹನಗಳ ಸಾಂದ್ರತೆ ಹಾಗೂ ವಾಹನಗಳು ಇರುವಂತಹ ಬದ್ಧತೆಗಳನ್ನ ಮಿತಿಮೀರಿ ಚಲಾಯಿಸಲಾಗುತ್ತಿದೆ ಈ ಕಾರಣಕ್ಕಾಗಿ ಅಪಘಾತಗಳು ಸಂಭವಿಸುತ್ತಿದೆ ಅದಲ್ಲದೆ ರನ್ನಿಂಗ್ ರೇಸ್ ರೀತಿಯಲ್ಲಿ ವಾಹನ ಸಂಚರಿಸುವುದು ಅಪಘಾತಕ್ಕೆ ಕಾರಣವಾಗಲಿದೆ ಎಂದು ಪ್ರತಾಪ್ ಸಿಂಹ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆ ಅನ್ವಯ ರಾಜ್ಯದಲ್ಲಿ ಪ್ರತಿಷ್ಠಿತ ಹಾಗೂ ವಿಶೇಷ ಪಟ್ಟಣಗಳ ವ್ಯಾಪ್ತಿಗೆ ಬರುವಂತೆ, ನಿರ್ಮಿಸಲಾದ ಕೆಲವು ರಸ್ತೆಗಳು ಇದೇ ರೀತಿ ಅಪಘಾತ ಸಂಭವಿಸುತ್ತಿದ್ದು ಇದಕ್ಕೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕರ್ನಾಟಕದ ಮೊದಲ ಎಕ್ಸ್ಪ್ರೆಸ್ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಗಟ್ಟಲು ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಹೌದು…ಅತೀ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವುದರಿಂದ ವಾಹನಗಳ ವೇಗ ಮಿತಿ 100 ಜಾರಿಗೊಳಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ಎಡಿಜಿಪಿ ಅಲೋಕ್ ಮೋಹನ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಮೊನ್ನೇ ಅಷ್ಟೇ ಅಲೋಕ್ ಮೋಹನ್ ಅವರು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸಿ ಅತಿ ಹೆಚ್ಚು ಅಪಘಾತವಾಗುವ ಸ್ಪಾಟ್ಗಳನ್ನು ಪರಿಶೀಲನೆ ಮಾಡಿದ್ದರು. ಬಳಿಕ ರಾಮನಗರದಲ್ಲಿ ಮಾತನಾಡಿದ್ದ ಅಲೋಕ್ ಮೋಹನ್, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದಾಗಿನಿಂದಲೂ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟಲು 119 ಕಿಲೋಮೀಟರ್ ವರೆಗಿನ ಹೆದ್ದಾರಿಯಲ್ಲಿ ಸ್ಪೀಡ್ ರಾಡಾರ್ ಗನ್ ಮತ್ತು ವಾಹನ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ವಾಹನ ಮಿತಿಗಿಂತ ವೇಗವಾಗಿ ಚಲಿಸುತ್ತಿದ್ದರೆ ಸ್ಪೀಡ್ ರಾಡಾರ್ ಗನ್ನಲ್ಲಿ ಸೆರೆಯಾಗಲಿದ್ದು, ವಾಹನ ಸಂಖ್ಯೆಗೆ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಮಧ್ಯಮ ಗಾತ್ರದ ವಾಹನಗಳನ್ನು ಚಾಲನೆ ಮಾಡುವವರು ಅತಿವೇಗದ ಅಥವಾ ಅಜಾಗರೂಕತೆಯ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡುವುದರಿಂದ ಮಾತ್ರ ಅಪಘಾತಗಳು ಸಂಭವಿಸುತ್ತವೆ. ಇದು ಅವೈಜ್ಞಾನಿಕ ರಸ್ತೆಯಿಂದಲ್ಲ. ಈ ಎಕ್ಸ್‌ಪ್ರೆಸ್‌ ವೇ ರೇಸಿಂಗ್ ಟ್ರ್ಯಾಕ್ ಅಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಆದರೆ ತಡೆರಹಿತ ಪ್ರಯಾಣಕ್ಕಾಗಿ ನಿರ್ಮಾಣ ಮಾಡಲಿದೆ ಎಂಬ ಅರಿವು ಇರಬೇಕು ಎಂದಿದ್ದಾರೆ.

ಎಕ್ಸ್‌ಪ್ರೆಸ್‌ ವೇಯನ್ನು ವಾಹನಗಳು ಗಂಟೆಗೆ 120 ಕಿಮೀ ಗರಿಷ್ಠ ವೇಗದ ಮಿತಿಯೊಂದಿಗೆ ಚಲಿಸಲು ವಿನ್ಯಾಸಗೊಳಿಸಲಾಗಿದೆ. 80 ಕಿಮೀ ನಿಂದ 100 ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವುದಿಲ್ಲ. ಇಷ್ಟು ವೇಗದಲ್ಲಿ ಪ್ರಯಾಣಿಸಿದರೂ ಒಂದೂವರೆ ಗಂಟೆಯಲ್ಲಿ ಬೆಂಗಳೂರು ತಲುಪಬಹುದು. ಜನರು 10-15 ನಿಮಿಷಗಳನ್ನು ಉಳಿಸುವುದಕ್ಕಾಗಿ ವೇಗದ ಮಿತಿಯನ್ನು ದಾಟಬಾರದು. ಐಷಾರಾಮಿ ಕಾರಿನಲ್ಲಿ, ಕೆಲವರು 140-150 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರೆ ಅದನ್ನು ಹೇಗೆ ನಿಯಂತ್ರಿಸಬಹುದು? ಇದು ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.ವರದಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI)
ಈ ಆರು ಪಥಗಳ ಮುಖ್ಯ ಹೆದ್ದಾರಿಯಲ್ಲಿ ದ್ವಿಚಕ್ರ, ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ತೀರ್ಮಾನಿಸಿದ್ದು, ಸರ್ವೀಸ್ ರಸ್ತೆಯಲ್ಲಿ ಮಾತ್ರ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.ಈ ವರ್ಷದ ಅಂದರೆ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡ ನಂತರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.

ಹೆದ್ದಾರಿ ಪ್ರಾಧಿಕಾರ ಇದರ ಬಗ್ಗೆ ಮುತುವರ್ಜಿಯನ್ನು ವಹಿಸಿ ಅಪಘಾತಗಳ ತಡೆಗೆ ಪೊಲೀಸ್ ಇಲಾಖೆಯು ಅಧಿಕಾರಿಗಳ ಜೊತೆ ಮಾತನಾಡಿ ಇದರ ಬಗ್ಗೆ ಕೂಲಂಕುಶ ಮಾಹಿತಿಯನ್ನು ತೆಗೆದುಕೊಂಡರು ಅದಲ್ಲದೆ ವಾಹನ ಸಂಚಾರ 100 ಮಿತಿಗೆ ಸಂಚರಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.