ಡೈಲಿ ವಾರ್ತೆ:19 ಜುಲೈ 2023
ಕೋಟ: ಜು.25 ರಂದು ಪಂಚವರ್ಣ ರಜತ ಗೌರವ ಪ್ರದಾನಕ್ಕೆ ವೆರಿಕೋಸ್ ತಜ್ಞ ಡಾ.ಎಂ.ವಿ ಉರಾಳ ಆಯ್ಕೆ
ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಕರಾವಳಿಯ ಆರೋಗ್ಯದಾತ ಬಿರುದಾಂಕಿತ ವೆರಿಕೋಸ್ ತಜ್ಞ ಡಾ.ಎಂ.ವಿ ಉರಾಳ ಇವರನ್ನು ಆಯ್ಕೆಗೊಳಿಸಲಾಗಿದೆ.
ಪಂಚವರ್ಣ ಸಂಸ್ಥೆ ನೀಡುತ್ತಿರುವ ಏಳನೆ ಸಾಧಕ ಶಕ್ತಿಯಾಗಿದ್ದು ವೆರಿಕೋಸ್ ರೋಗದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ರಾಜ್ಯಾದ್ಯಂತ ಡಾ.ಉರಾಳಸ್ ಕ್ಲಿನಿಕ್ ಸೃಷ್ಠಿಸಿ ಅದೆಷ್ಟೂ ಅನಾರೋಗ್ಯ ಪೀಡಿತರಿಗೆ ನೆರವು ನೀಡಿದ್ದಾರೆ ಇವರ ಈ ಸೇವೆಗೆ ಪಂಚವರ್ಣ ಸಂಸ್ಥೆ ರಜತ ಗೌರವ ನೀಡಿ ಗೌರವಿಸಲಿದೆ ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ.ತಿಮ್ಮ ಪೂಜಾರಿ, ಸಮಾಜಸೇವಕ ಈಶ್ವರ್ ಮಲ್ಪೆ, ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ, ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ, ಸಾಲಿಗ್ರಾಮದ ಹಿರಿಯ ವೈದ್ಯರಾದ ಡಾ.ವಿಶ್ವೇಶ್ವರ ತುಂಗ, ಸಹಕಾರಿ ಕ್ಷೇತ್ರದ ಕೊರಗ ಪೂಜಾರಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಪಾರಂಪಳ್ಳಿ ಗಣೇಶ್ ಅಡಿಗ,ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಇದೇ ಜು.25ರಂದು ಮಣೂರು ಅವರ ಸ್ವಗೃಹದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.