ಡೈಲಿ ವಾರ್ತೆ:20 ಜುಲೈ 2023

ಕೋಟತಟ್ಟು ಗ್ರಾ. ಪಂ ಸಾರಥ್ಯದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಶಶಿಚಂದ್ರ ಯಕ್ಷಗಾನ ಬಳಗ ಉಡುಪಿ ಇವರ ಸಹಯೋಗದಲ್ಲಿ “ಮನೆ ಮನೆಗೆ ಗಂಗೆ” ಎನ್ನುವ ಯಕ್ಷಗಾನ ಪ್ರದರ್ಶನ

ಕೋಟ: ಕೋಟತಟ್ಟ ಗ್ರಾಮ ಪಂಚಾಯತ್ ಸಾರಥ್ಯದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ವಿಭಾಗ ಉಡುಪಿ, ಪುಣ್ಯಕೋಟಿ ಅನುಷ್ಠಾನ ಬೆಂಬಲ ಸಂಸ್ಥೆ, ಜಲಜೀವನ ಮಿಷನ್ ಯೋಜನೆಯಡಿ ಶಶಿಚಂದ್ರ ಯಕ್ಷಗಾನ ಬಳಗ ಉಡುಪಿ ಇವರ ಸಹಯೋಗದಲ್ಲಿ “ಮನೆ ಮನೆಗೆ ಗಂಗೆ ಎನ್ನುವ ಯಕ್ಷಗಾನ ಪ್ರದರ್ಶನವನ್ನು ಜು. 20 ರಂದು ಗುರುವಾರ ಬೆಳಿಗ್ಗೆ 10:30ಕ್ಕೆ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ಬ್ರಹ್ಮಾವರ ತಾಲೂಕು ಪಂಚಾಯತ್ ನ ಮಾನ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ. ಎಚ್. ವಿ .ಇಬ್ರಾಹಿಂಪುರ ಅವರು ಚಂಡೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಕೆ.ಸತೀಶ್ ಕುಂದರ್, ಪುಣ್ಯಕೋಟಿ ಅನುಷ್ಠಾನ ಬೆಂಬಲ ಸಂಸ್ಥೆ ಜೆಜೆಎಂ ತಂಡದ ನಾಯಕರಾದ ಗಿರೀಶ್ ಟಿ ವಿ ಹಾಗೂ ತಂಡದವರು, ಜಿಲ್ಲಾ ಪಂಚಾಯತ್ ನ ಸುಧೀರ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿವೇಕ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ. ರವೀಂದ್ರ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿವೇಕ ಬಾಲಕರ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಶ್ರೀ. ವೆಂಕಟೇಶ್ ಉಡುಪ ಅವರು ವಂದಿಸಿದರು.